ಕೋಲ್ಕತ್ತಾದಲ್ಲಿ ಭೂಕಂಪನದ ಅನುಭವ; ಕೆಲಕಾಲ ಬೆಚ್ಚಿಬಿದ್ದ ಜನತೆ!

0
2
Advertisement

ಕೋಲ್ಕತ್ತಾ, ಫೆ.27:ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಪ್ರಬಲ ಭೂಕಂಪನದ ಅನುಭವವಾಗಿದ್ದು, ಕೆಲಕಾಲ ಜನರಲ್ಲಿ ಆತಂಕ ಮೂಡಿತು. ಮಧ್ಯಾಹ್ನ 1:22ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಮನೆಗಳು, ಕಚೇರಿಗಳು ಹಾಗೂ ಶಾಲೆಗಳ ಕಟ್ಟಡಗಳಿಂದ ಜನರು ಹೊರಗೆ ಓಡಿಬಂದರು ಎಂದು ನಿವಾಸಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಮಾಹಿತಿ ಪ್ರಕಾರ, ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.5 ದಾಖಲಾಗಿದ್ದು, ಇದು ಭೂಮಿಯ 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಕೇಂದ್ರ ಬಿಂದು ಬಾಂಗ್ಲಾದೇಶದಲ್ಲಿ 22.57° ಉತ್ತರ ಅಕ್ಷಾಂಶ ಮತ್ತು 89.11° ಪೂರ್ವ ರೇಖಾಂಶದಲ್ಲಿದೆ ಎಂದು ತಿಳಿಸಿದೆ.

ಇನ್ನೊಂದೆಡೆ, ಯುಎಸ್ ಜಿಯೋಲಾಜಿಕಲ್‌ ಸರ್ವೆ 5.3 ತೀವ್ರತೆಯನ್ನು ದಾಖಲಿಸಿದ್ದು, ಕೇಂದ್ರ ಬಿಂದು ಪಶ್ಚಿಮ ಬಂಗಾಳದ ಟಕಿ ಪ್ರದೇಶದಿಂದ ಸುಮಾರು 26 ಕಿ.ಮೀ ಆಗ್ನೇಯಕ್ಕೆ ಇದೆ ಎಂದು ದೃಢಪಡಿಸಿದೆ. ಆರಂಭಿಕ ವರದಿಗಳಲ್ಲಿ ಭೂಕಂಪದ ತೀವ್ರತೆ 4.9 ಎಂದು ಉಲ್ಲೇಖಿಸಲಾಗಿತ್ತು.

ಮೊದಲು ಬಾಂಗ್ಲಾದೇಶದಲ್ಲಿ ಸಂಭವಿಸಿದ ಭೂಕಂಪನದ ಅಲೆಗಳು ನಂತರ ಕೋಲ್ಕತ್ತಾಕ್ಕೆ ತಲುಪಿದವು. ನಗರಾದ್ಯಂತ ಸೀಲಿಂಗ್ ಫ್ಯಾನ್‌ಗಳು ಅಲುಗಾಡಿದ್ದು, ಪೀಠೋಪಕರಣಗಳು ನಡುಗಿದವು; ಕಿಟಕಿಗಳು ಕಂಪಿಸಿ ಸದ್ದು ಮಾಡಿದವು ಎಂದು ಹಲವು ಪ್ರದೇಶಗಳ ನಿವಾಸಿಗಳು ತಿಳಿಸಿದ್ದಾರೆ. ಬಹುಮಹಡಿ ಕಟ್ಟಡಗಳಲ್ಲಿ ಕಂಪನದ ಪರಿಣಾಮ ಹೆಚ್ಚು ತೀವ್ರವಾಗಿ ಕಂಡುಬಂದಿದೆ. ಭಾರತ–ಬಾಂಗ್ಲಾದೇಶ ಗಡಿಯ ಸಮೀಪದ ಜಿಲ್ಲೆಗಳಲ್ಲಿಯೂ ಕಂಪನದ ವರದಿಗಳು ಬಂದಿವೆ.

Advertisement

LEAVE A REPLY

Please enter your comment!
Please enter your name here