ಸಂಸತ್ತಿನಲ್ಲಿ ಸ್ಮಾರ್ಟ್ ಕನ್ನಡಕ, ಪೆನ್ ಕ್ಯಾಮೆರಾ ಬಳಕೆಗೆ ತಡೆ: ಲೋಕಸಭಾ ಸಚಿವಾಲಯದಿಂದ ಸೂಚನೆ!

0
30
Advertisement

ನವದೆಹಲಿ, ಡಿ.25: ಸಂಸದರ ಗೌಪ್ಯತೆ ಕಾಪಾಡುವ ಉದ್ದೇಶದಿಂದ, ಸಂಸತ್ತಿನಲ್ಲಿ ಸ್ಮಾರ್ಟ್ ಕನ್ನಡಕ, ಪೆನ್ ಕ್ಯಾಮೆರಾ ಮತ್ತು ಸ್ಮಾರ್ಟ್ ಕೈಗಡಿಯಾರಗಳಂತಹ ಡಿಜಿಟಲ್ ಸಾಧನಗಳನ್ನು ಬಳಸದಂತೆ ಲೋಕಸಭಾ ಸಚಿವಾಲಯ ಬುಧವಾರ ಎಲ್ಲಾ ಸಂಸದರಿಗೆ ಸೂಚಿಸಿದೆ

ಡಿಜಿಟಲ್ ಸಾಧನಗಳನ್ನು ಉಪಯೋಗಿಸಿ ಸಂಸತ್ತಿನ ಗೌರವಕ್ಕೆ ಲೋಪ ತರುವುದು ಸಂಸದೀಯ ನಿಯಮಗಳನ್ನು ಉಲ್ಲಂಘಿಸಿದಂತೆ ಎಂದು ಸಚಿವಾಲಯ ಎಚ್ಚರಿಸಿದೆ.

ಸಂಸತ್ತಿನಲ್ಲಿ ಯಾವುದೇ ಭಾಗದಲ್ಲಿ ಸದಸ್ಯರ ಭದ್ರತೆ, ಸವಲತ್ತುಗಳು ಮತ್ತು ಗೌಪ್ಯತೆಗೆ ಧಕ್ಕೆ ತರುವ ರೀತಿಯಲ್ಲಿ ಯಾವುದೇ ಸಾಧನಗಳನ್ನು ಬಳಸಬಾರದು ಎಂದು ಸಂಸದರಿಗೆ ವಿನಂತಿಸಲಾಗಿದೆ.

Advertisement

LEAVE A REPLY

Please enter your comment!
Please enter your name here