Advertisement 

ಚಾಮರಾಜನಗರ: ಹನೂರು ತಾಲೂಕಿನ ಅಂಚಿಪಾಳ್ಯ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ದುಸ್ಥಿತಿಗೆ ತಲುಪಿದೆ. ಕಟ್ಟಡದಲ್ಲಿ ಬಿರುಕು ಬಿಟ್ಟಿದ್ದು, ಮೇಲ್ಛಾವಣಿಯ ಸೀಲಿಂಗ್ ಉದುರಲು ಆರಂಭಿಸಿದೆ.
ಮಳೆ ಬಿದ್ದಾಗ ತರಗತಿ ಕೊಠಡಿಗಳು ಸೋರುತ್ತಿವೆ. ಶಾಲೆಯಲ್ಲಿ ಶೌಚಾಲಯ ಸೌಲಭ್ಯ, ಪೀಠೋಪಕರಣಗಳು, ಆಟದ ಮೈದಾನಗಳ ಕೊರತೆ ವಿದ್ಯಾರ್ಥಿಗಳಿಗೆ ಸಂಕಷ್ಟ ತಂದಿದೆ. ಅವ್ಯವಸ್ಥೆಯಿಂದ ಬೇಸತ್ತ ಮಕ್ಕಳು, ಕಟ್ಟಡವನ್ನು ಶೀಘ್ರ ದುರಸ್ತಿಪಡಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಗ್ರಾಮಸ್ಥರು ತಿಳಿಸಿದಂತೆ, ಹಲವು ಬಾರಿ ದೂರು ನೀಡಿದರೂ ಶಿಕ್ಷಣಾಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದ ಶಿಕ್ಷಣ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement 
