
ಬಳ್ಳಾರಿ, ನ. 26: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಬಳ್ಳಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಬಳ್ಳಾರಿ ಇವರ ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಬಳ್ಳಾರಿಯ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಬುಧವಾರ ನಡೆಯಿತು.

ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾಭಿವೃದ್ಧಿ ನಿಗಮಮಂಡಳಿಯ ಅಧ್ಯಕ್ಷರಾದ ಮುಂಡ್ರಿಗಿ ನಾಗರಾಜ್ ಮಾತನಾಡಿ, ಸಂವಿಧಾನದ 32ನೇ ವಿಧಿಯಿಂದಾಗಿ ಸಾಮಾನ್ಯ ನಾಗರಿಕನೊಬ್ಬ ಸರ್ವೊಚ್ಛ ನ್ಯಾಯಾಲಯದ ಕದ ತಟ್ಟಬಹುದು. ವಿವಿಧತೆಯಲ್ಲಿ ಏಕತೆ ಇದು ಕೇವಲ ನುಡಿ ಅಲ್ಲ. ಅದೊಂದು ಜೀವನ ಶೈಲಿ. ಎಲ್ಲಿಯವರೆಗೆ ವೈವಿಧ್ಯತೆಯಿರುತ್ತದೆಯೋ ಅಲ್ಲಿಯವರೆಗೂ ಭಾರತ ಇರುತ್ತದೆ ಅನ್ನುವುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು ಎಂದರು.

ಸಮಾರಂಭದಲ್ಲಿ ಮಹಾ ನಗರ ಪಾಲಿಕೆ ಪೂಜ್ಯ ಮಹಾ ಪೌರರಾದ ಪಿ. ಗಾದೆಪ್ಪ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮಾನಯ್ಯ ಸೇರಿದಂತೆ ಇತರ ಮುಖಂಡರುಗಳು ಭಾಗವಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪಂಚಾಯತ್ ಮುಖ್ಯಾ ಕಾರ್ಯ ನಿರ್ವಾಹಕ ಅಧಿಕಾರಿ ಅಹಮ್ಮದ್ ಹಾರಿಸ್ ಸುಮೇರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶೋಭಾರಾಣಿ ವಿ.ಜೆ., ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರಾದ ಮಂಜುನಾಥ ಪಿ. ಎಸ್. ಬಳ್ಳಾರಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ ಎನ್. ಬಳ್ಳಾರಿ, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿರಿದ್ದರು.





