ಬ್ಲೂ ಬರ್ಡ್‌ ಬ್ಲಾಕ್-‌2 ಉಪಗ್ರಹ ಯಶಸ್ವಿ ಉಡಾವಣೆ; ಇಸ್ರೋದಿಂದ ಮತ್ತೊಂದು ಐತಿಹಾಸಿಕ ಮೈಲಿಗಲ್ಲು!

0
28
Advertisement

ಶ್ರೀಹರಿಕೋಟಾ, ಡಿ.24: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ಬ್ಲೂ ಬರ್ಡ್‌ ಬ್ಲಾಕ್-‌2 ಉಪಗ್ರಹವನ್ನು ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಯನ ಕೇಂದ್ರದ 2ನೇ ಲಾಂಚ್ ಪ್ಯಾಡ್‌ನಿಂದ ಇಂದು ಗುರುವಾರ ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ ಬಾಹ್ಯಾಕಾಶದಲ್ಲಿ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಉಪಗ್ರಹವನ್ನು ದೋಷರಹಿತವಾಗಿ ಕಕ್ಷೆಗೆ ಸೇರಿಸಲಾಗಿದೆ.

ಬ್ಲೂ ಬರ್ಡ್‌ ಬ್ಲಾಕ್-‌2 ಉಪಗ್ರಹ ಇಸ್ರೋದ ಅತ್ಯಂತ ಭಾರದ ಉಪಗ್ರಹ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಸುಮಾರು 6100 ಕೆ.ಜಿ ತೂಕದ ಈ ಉಪಗ್ರಹವನ್ನು ಉಡಾವಣೆಯಾದ ಸುಮಾರು 15 ನಿಮಿಷಗಳ ನಂತರ ಕೆಳ ಭೂಮಿಯ ಕಕ್ಷೆಗೆ ಸೇರಿಸಿತು. ಈ ಸಂವಹನ ಉಪಗ್ರಹವನ್ನು ಅಮೆರಿಕದ ಎಎಸ್‌ಟಿ ಸ್ಪೇಸ್‌ಮೊಬೈಲ್ ಅಭಿವೃದ್ಧಿಪಡಿಸಿದೆ.

ಬ್ಲೂಬರ್ಡ್ ಬ್ಲಾಕ್-2 ಉಪಗ್ರಹದ ಮೂಲಕ ನೇರ-ಮೊಬೈಲ್ ಸಂಪರ್ಕವನ್ನು ಒದಗಿಸುತ್ತದೆ. ಈ ಸಮೂಹವು 4G ಮತ್ತು 5G ಧ್ವನಿ ಮತ್ತು ವೀಡಿಯೊ ಕರೆಗಳು, ಪಠ್ಯಗಳು, ಸ್ಟ್ರೀಮಿಂಗ್ ಮತ್ತು ಡೇಟಾವನ್ನು ಎಲ್ಲರಿಗೂ, ಎಲ್ಲೆಡೆ, ಎಲ್ಲಾ ಸಮಯದಲ್ಲೂ ಸಕ್ರಿಯಗೊಳಿಸುತ್ತದೆ.

Advertisement

LEAVE A REPLY

Please enter your comment!
Please enter your name here