Advertisement 

ಬಾಗಲಕೋಟೆ: ಭೂಸ್ವಾಧೀನ ಮಾಡಿದರೂ ರೈತರಿಗೆ ಪರಿಹಾರ ಹಣ ನೀಡದ ಕಾರಣಕ್ಕೆ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಪಟ್ಟಣ ಪ್ರಾಧಿಕಾರದ ಯುನಿಟ್-3 ಅಭಿವೃದ್ಧಿ ಯೋಜನೆಗಾಗಿ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡಿದ್ದರೂ ಪರಿಹಾರ ಹಣ ನೀಡಲಾಗಿರಲಿಲ್ಲ. ಇದರಿಂದ ರೈತರು 2ನೇ ಕಂತಿನ ಪರಿಹಾರಕ್ಕಾಗಿ 5ನೇ ಹೆಚ್ಚುವರಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದರು. ವಿಚಾರಣೆ ಬಳಿಕ ಕೋರ್ಟ್ ಪರಿಹಾರ ನೀಡಲು ಆದೇಶಿಸಿತು.
ಆದೇಶ ಜಾರಿಗೊಳಿಸದ ಕಾರಣ ಇಂದು ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು ಮೂರು ಪ್ರಕರಣಗಳಿಗೆ 1.80 ಕೋಟಿ ರೂಪಾಯಿ ಪರಿಹಾರ ನೀಡಬೇಕಿದೆ ಎಂದು ವಕೀಲರು ತಿಳಿಸಿದ್ದಾರೆ.
Advertisement 
