ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ

0
7

ನವದೆಹಲಿ, ಏ.15: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) 2026ನೇ ಸಾಲಿನ 10ನೇ ತರಗತಿಯ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಬುಧವಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಬಾರಿ ಸುಮಾರು 25 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದ ವಿದ್ಯಾರ್ಥಿಗಳ ನಿರೀಕ್ಷೆಗೆ ತೆರೆಬಿದ್ದಿದೆ.

ಫೆಬ್ರವರಿ 17ರಿಂದ ಮಾರ್ಚ್ 11ರವರೆಗೆ ನಡೆದಿದ್ದ ಪರೀಕ್ಷೆಗಳ ಫಲಿತಾಂಶಗಳು ಇದೀಗ ಲಭ್ಯವಾಗಿದ್ದು, ವಿದ್ಯಾರ್ಥಿಗಳು ಅಂತರ್ಜಾಲದ ಮೂಲಕ ತಮ್ಮ ಅಂಕಪಟ್ಟಿಗಳನ್ನು ವೀಕ್ಷಿಸಬಹುದಾಗಿದೆ.

ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ಜಾಲತಾಣಗಳಾದ results.cbse.nic.in ಹಾಗೂ cbse.gov.in ಗೆ ಭೇಟಿ ನೀಡಿ ಮುಖ್ಯ ಪುಟದಲ್ಲಿ ಕಾಣುವ 10ನೇ ತರಗತಿ ಫಲಿತಾಂಶ ಸಂಬಂಧಿತ ಕೊಂಡಿಯನ್ನು ಆಯ್ಕೆ ಮಾಡುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು. ಫಲಿತಾಂಶ ವೀಕ್ಷಿಸಲು ಪ್ರವೇಶ ಸಂಖ್ಯೆ, ಶಾಲಾ ಸಂಖ್ಯೆ ಹಾಗೂ ಪ್ರವೇಶ ಪತ್ರ ಗುರುತು ಸಂಖ್ಯೆಯನ್ನು ನಮೂದಿಸುವುದು ಅಗತ್ಯವಾಗಿದೆ.

ಇದಲ್ಲದೆ, DigiLocker ಮೂಲಕವೂ ಅಂಕಪಟ್ಟಿಗಳು ಲಭ್ಯವಿದ್ದು, ವಿದ್ಯಾರ್ಥಿಗಳು ‘ಅಪಾರ್ ಗುರುತು ಸಂಖ್ಯೆ(APAAR ID) ಅಥವಾ ಶಾಲೆಯಿಂದ ನೀಡಲಾದ ಆರು ಅಂಕಿಗಳ ಭದ್ರತಾ ಸಂಕೇತವನ್ನು ಬಳಸಿಕೊಂಡು ಪ್ರವೇಶಿಸಿ ತಮ್ಮ ಪ್ರಮಾಣಪತ್ರಗಳನ್ನು ಪಡೆಯಬಹುದು. ಈ ಡಿಜಿಟಲ್ ಅಂಕಪಟ್ಟಿಗಳು ಸಹ ಅಧಿಕೃತವಾಗಿದ್ದು, ಮುಂದಿನ ಶಿಕ್ಷಣ ಪ್ರವೇಶ ಪ್ರಕ್ರಿಯೆಗಳಲ್ಲಿ ಬಳಸಲು ಮಾನ್ಯವಾಗಿರುತ್ತದೆ.

LEAVE A REPLY

Please enter your comment!
Please enter your name here