ಬೆಂಗಳೂರು: ಎಲ್‌ಪಿಜಿ ಅಭಾವದ ಹೊಡೆತ – ಕರಾವಳಿ ಹೋಟೆಲ್‌ಗಳಲ್ಲಿ ಕುಚಲಕ್ಕಿ ಬಂದ್!

0
2
Advertisement

ಬೆಂಗಳೂರು, ಮಾ.20: ನಗರದಲ್ಲಿ ಎಲ್‌ಪಿಜಿ ಗ್ಯಾಸ್ ಕೊರತೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಶೈಲಿಯ ಊಟ ನೀಡುವ ಹಲವಾರು ಹೋಟೆಲ್‌ಗಳಲ್ಲಿ ಕುಚಲಕ್ಕಿ (boiled rice) ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಊಟಪ್ರಿಯರಿಗೆ ತೊಂದರೆ ಉಂಟಾಗಿದ್ದು, ಪರ್ಯಾಯವಾಗಿ ವೈಟ್ ರೈಸ್ ನೀಡಲಾಗುತ್ತಿದೆ.

ಹೋಟೆಲ್ ಮಾಲೀಕರ ಪ್ರಕಾರ, ಕುಚಲಕ್ಕಿ ಬೇಯಿಸಲು ಹೆಚ್ಚಿನ ಸಮಯ ಹಾಗೂ ಗ್ಯಾಸ್ ಅಗತ್ಯವಿರುವುದರಿಂದ, ಪ್ರಸ್ತುತ ಪರಿಸ್ಥಿತಿಯಲ್ಲಿ ಅದನ್ನು ಪೂರೈಸುವುದು ಕಷ್ಟಕರವಾಗಿದೆ. “ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದರಿಂದ, ಕಡಿಮೆ ಸಮಯದಲ್ಲಿ ಸಿದ್ಧವಾಗುವ ಪದಾರ್ಥಗಳತ್ತ ಮೊರೆ ಹೋಗಬೇಕಾಗಿದೆ” ಎಂದು ಕೆಲವು ಹೋಟೆಲ್ ನಿರ್ವಾಹಕರು ತಿಳಿಸಿದ್ದಾರೆ.

ನಗರದ ಹಲವು ಸಣ್ಣ ಹೋಟೆಲ್‌ಗಳು ಗ್ಯಾಸ್ ಕೊರತೆಯಿಂದಾಗಿ ಈಗಾಗಲೇ ತಾತ್ಕಾಲಿಕವಾಗಿ ಬಂದ್ ಆಗಿದ್ದು, ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಇನ್ನೊಂದೆಡೆ, ಕೆಲವು ಹೋಟೆಲ್‌ಗಳು ಇದೇ ಸಂದರ್ಭವನ್ನು ಬಳಸಿಕೊಂಡು ದರ ಏರಿಕೆ ಮಾಡುತ್ತಿರುವ ಆರೋಪವೂ ಕೇಳಿಬರುತ್ತಿದೆ.

ಸಾಮಾನ್ಯವಾಗಿ ಚಪಾತಿ-ಸಾರು ಕೇಳಿದರೂ ಗ್ಯಾಸ್ ಅಭಾವದ ನೆಪ ನೀಡಲಾಗುತ್ತಿದ್ದು, ಗ್ರಾಹಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ, ಎಲ್‌ಪಿಜಿ ಕೊರತೆಯ ಪರಿಣಾಮವಾಗಿ ನಗರದ ಹೋಟೆಲ್ ಉದ್ಯಮ ಸಂಕಷ್ಟವನ್ನು ಎದುರಿಸುತ್ತಿದೆ.

Advertisement

LEAVE A REPLY

Please enter your comment!
Please enter your name here