ವೆನೆಜುವೆಲಾ ಅಧ್ಯಕ್ಷ ಮಡುರೊ ಬಂಧನ; ತೈಲ ನಿಕ್ಷೇಪ ಬಳೆಕೆ ಮೇಲೆ ಟ್ರಂಪ್ ಹದ್ದಿನ ಕಣ್ಣು!

0
59

ವಾಷಿಂಗ್ಟನ್, ಜ.04: ವೆನೆಜುವೆಲಾ ಅಧ್ಯಕ್ಷ ಮಡುರೊ ಅವರನ್ನು ಬಂಧಿಸಿದ ನಂತರ, ‘ಈ ದೇಶ ಅಮೇರಿಕದ ಅಧೀನದಲ್ಲೇ ಇರಲಿದೆ, ಅದನ್ನು ಯಾರ ಸುಪರ್ದಿಗೂ ನೀಡುವುದಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಘೋಷಿಸಿದ್ದಾರೆ. ಅಲ್ಲದೆ ಅಲ್ಲಿನ ತೈಲ ನಿಕ್ಷೇಪವನ್ನು ಅಮೇರಿಕವೇ ಬಳಸಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ವೆನೆಜುವೆಲಾದಲ್ಲಿ ಅಮೆರಿಕ ಸೇನೆಯ ದಾಳಿ ಹಾಗೂ ಕಾರ್ಯಾಚರಣೆ ಬಳಿಕ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಕುಟುಂಬದ ಬಂಧನ ನಡೆದ ಹಿನ್ನೆಲೆಯಲ್ಲಿ, ಮಾರ್-ಎ-ಲಾಗೊ ಕ್ಲಬ್‌ನಲ್ಲಿ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ವೆನೆಜುವೆಲಾ ಕುರಿತು ಅಮೆರಿಕ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು. ಈ ವೇಳೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ಉನ್ನತ ಸೇನಾ ಜನರಲ್ ಡಾನ್ ಕೇನ್ ಉಪಸ್ಥಿತರಿದ್ದರು.

ಸುರಕ್ಷಿತ ರಾಜಕೀಯ ಪರಿವರ್ತನೆ ಪೂರ್ಣಗೊಳ್ಳುವವರೆಗೂ ಅಮೆರಿಕವೇ ವೆನೆಜುವೆಲಾವನ್ನು ನಿರ್ವಹಿಸಲಿದೆ. ಅಲ್ಲಿನ ಬೃಹತ್ ತೈಲ ನಿಕ್ಷೇಪಗಳನ್ನು ಬಳಸಿಕೊಳ್ಳಲಾಗುವುದು. ಒಂದು ನಿರ್ದಿಷ್ಟ ತಂಡದೊಂದಿಗೆ ಆಡಳಿತ ನಡೆಸಲಾಗುತ್ತದೆ. ಅದಕ್ಕಾಗಿ ಅಗತ್ಯ ಸಿಬ್ಬಂದಿಯನ್ನು ನೇಮಿಸಲಾಗುತ್ತಿದ್ದು, ಕ್ಯಾಬಿನೆಟ್ ಅಧಿಕಾರಿಗಳು ಮೇಲ್ವಿಚಾರಣೆ ವಹಿಸಲಿದ್ದಾರೆ ಎಂದು ಟ್ರಂಪ್ ಹೇಳಿದರು.

LEAVE A REPLY

Please enter your comment!
Please enter your name here