Advertisement 

ಬೆಂಗಳೂರು, ಡಿ.29: ಮೆಟ್ರೋದಲ್ಲಿನ ಪ್ರಯಾಣಿಕರ ಹಿತದೃಷ್ಟಿಯಿಂದ ಬಿ.ಎಮ್.ಆರ್.ಸಿ.ಎಲ್ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಮೆಟ್ರೋದಲ್ಲಿ ರೀಲ್ಸ್ ನೋಡುವುದಕ್ಕೆ ನಿಷೇಧ ಹೇರಲಾಗಿದೆ. ಸಹ ಪ್ರಯಾಣಿಕರಿಗೆ ಕಿರಿಕಿರಿ-ತೊಂದರೆಯನ್ನುಂಟು ಮಾಡುವಂತೆ ದೊಡ್ಡ ಧ್ವನಿಯಲ್ಲಿ ರೀಲ್ಸ್ ನೋಡಿದರೆ ಇನ್ನುಮುಂದೆ ದಂಡ ಬೀಳಲಿದೆ.
ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ನಿರಂತರವಾಗಿ ಬಿ.ಎಂ.ಆರ್.ಸಿ.ಎಲ್ ಗೆ ದೂರುಗಳು ಬರುತ್ತಿರುವುದರಿಂದ ಇಂತಹ ಕ್ರಮಕ್ಕೆ ಸಂಸ್ಥೆ ಮುಂದಾಗಿದೆ. ಇಯರ್ ಫೋನ್ ಇಲ್ಲದೆ ರೀಲ್ಸ್ ನೋಡುವುದು ಮೆಟ್ರೋ ಸಿಬ್ಬಂದಿಗಳ ಕಣ್ಣಿಗೆ ಬಿದ್ದಲ್ಲಿ ಮೊದಲಿಗೆ ವಾರ್ನ್ ಮಾಡುತ್ತಾರೆ. ಮತ್ತು ಮುಂದುವರಿಸಿದರೆ ದಂಡ ಫಿಕ್ಸ್! ಕನಿಷ್ಟ 500 ರೂ ದಂಡ ವಿಧಿಸಲು ಬಿ.ಎಂ.ಆರ್.ಸಿ.ಎಲ್ ತೀರ್ಮಾನಿಸಿದೆ.
Advertisement 





