ಮಕ್ಕಳಿಗೆ ನೀರು ಕುಡಿಯಲು ಉತ್ತೇಜನ ರಾಜ್ಯದ ಶಾಲೆಗಳಲ್ಲಿ ಆರಂಭವಾಗಲಿದೆಯೇ ‘Water Bell’?

0
3
water bell
Advertisement

ಬೆಂಗಳೂರು: ಶಾಲಾ ಅವಧಿಯಲ್ಲಿ ಮಕ್ಕಳಿಗೆ ನೀರು ಕುಡಿಯುವ ಅಭ್ಯಾಸ ಬೆಳೆಸಲು ರಾಜ್ಯದ ಶಾಲೆಗಳಲ್ಲಿ ‘ವಾಟರ್ ಬೆಲ್’ (Water Bell) ಕಾರ್ಯಕ್ರಮ ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಕೇರಳದಲ್ಲಿ ಈಗಾಗಲೇ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಅಲ್ಲಿ ದಿನಕ್ಕೆ ಎರಡು ಬಾರಿ ವಾಟರ್ ಬೆಲ್ ಮೊಳಗುತ್ತದೆ. ಬೆಳಗ್ಗೆ 10:30 ಮತ್ತು ಮಧ್ಯಾಹ್ನ 2:30ಕ್ಕೆ ಬೆಲ್‌ ಮೂಲಕ ಮಕ್ಕಳಿಗೆ ನೀರು ಕುಡಿಯುವಂತೆ ಪ್ರೋತ್ಸಾಹಿಸಲಾಗುತ್ತದೆ. ಈ ಕ್ರಮದ ಮುಖ್ಯ ಉದ್ದೇಶ ಮಕ್ಕಳ ಆರೋಗ್ಯ ಕಾಪಾಡುವುದು.

Read More: ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಮಾಧ್ಯಮಗಳಿಗೆ ನಿಷೇಧ ಹೇರಿಕೆ.

ಕೇರಳದಲ್ಲಿ ಆರಂಭಗೊಂಡಿರುವ ವಾಟರ್ ಬೆಲ್ ಕಾರ್ಯಕ್ರಮವನ್ನು ಈಗ ಕರ್ನಾಟಕದ ಶಾಲೆಗಳಲ್ಲೂ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಶಿಕ್ಷಣ ಇಲಾಖೆಯ ಮಟ್ಟದಲ್ಲಿ ಈಗಾಗಲೇ ಈ ಕುರಿತು ಚರ್ಚೆಗಳು ನಡೆದಿದ್ದು, ಶೀಘ್ರದಲ್ಲೇ ರಾಜ್ಯದ ಶಾಲೆಗಳಲ್ಲೂ ವಾಟರ್ ಬೆಲ್ ಕಾರ್ಯಕ್ರಮ ಅನುಷ್ಠಾನಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ವಾಟರ್ ಬೆಲ್ ಕಾರ್ಯಕ್ರಮದ ಉದ್ದೇಶ

  • ಶಾಲಾ ಮಕ್ಕಳನ್ನು ಹೆಚ್ಚು ನೀರು ಕುಡಿಯಲು ಉತ್ತೇಜಿಸುವುದು.
  • ಮಕ್ಕಳಿಗೆ ಸಮರ್ಪಕ ಪ್ರಮಾಣದಲ್ಲಿ ನೀರು ಕುಡಿಯುವ ಅಭ್ಯಾಸ ಬೆಳೆಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.
  • ಶಾಲೆಗಳಲ್ಲಿ ನೀರಿನ ಮಹತ್ವದ ಕುರಿತು ಜಾಗೃತಿ ಮೂಡಿಸುವುದು.
  • ಕೇರಳದಲ್ಲಿ ದಿನಕ್ಕೆ ಎರಡು ಬಾರಿ ವಾಟರ್ ಬೆಲ್ ಮೊಳಗಿಸಿ ಮಕ್ಕಳಿಗೆ ನೀರು ಕುಡಿಯಲು ಪ್ರೋತ್ಸಾಹಿಸಲಾಗುತ್ತಿದೆ.
  • ಕರ್ನಾಟಕದಲ್ಲೂ ದಿನಕ್ಕೆ 2-3 ಬಾರಿ ವಾಟರ್ ಬೆಲ್ ಮೂಲಕ ಮಕ್ಕಳ ಆರೋಗ್ಯ ಕಾಳಜಿ ಹಾಗೂ ನೀರಿನ ಅಗತ್ಯತೆಯ ಬಗ್ಗೆ ಅರಿವು ಮೂಡಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
Advertisement

LEAVE A REPLY

Please enter your comment!
Please enter your name here