
ಬೆಂಗಳೂರು, ಮಾ.07: ಪಾರದರ್ಶಕ ಮೀಡಿಯಾ ಫೌಂಡೇಶನ್ ವತಿಯಿಂದ ‘ಭೂ ಕಬಳಿಕೆ ಸಿದ್ಧಾಂತ’ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಮಾರ್ಚ್ 9ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ನಗರದ ಹರೇ ಕೃಷ್ಣ ರಸ್ತೆ, ಶಿವಾನಂದ ಸರ್ಕಲ್ ಸಮೀಪದಲ್ಲಿರುವ ‘ದಿ ಫೈಲ್’ ಕಚೇರಿಯಲ್ಲಿ ಸಂಜೆ 6:30ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ, ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್, ಡಾ. ಆರ್. ಪೂರ್ಣಿಮಾ, ಹಿರಿಯ ಪತ್ರಕರ್ತರು ಮತ್ತು ಟಿ.ಕೆ. ತ್ಯಾಗರಾಜ್, ಹಿರಿಯ ಪತ್ರಕರ್ತರು
ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪಾರದರ್ಶಕ ಮೀಡಿಯಾ ಫೌಂಡೇಶನ್ ನ ನಿರ್ದೇಶಕರಾದ ಮಲ್ಲಿಕಾರ್ಜುನ ಭಟ್ಟರಹಳ್ಳಿ ಹಾಗೂ ‘ ದಿ ಫೈಲ್’ ನ ಜಿ.ಮಹಾಂತೇಶ್ ಅವರ ಗೌರವ ಉಪಸ್ಥಿತಿ ಇರಲಿದೆ.
‘ದಿ ಫೈಲ್’ ಐದು ವರ್ಷಗಳನ್ನು ಪೂರ್ಣಗೊಳಿಸಿ ಆರನೇ ವರ್ಷಕ್ಕೆ ಕಾಲಿಡುತ್ತಿರುವುದನ್ನು ಸ್ಮರಿಸಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
‘ದಿ ಫೈಲ್’ ಸರಣಿ ರೂಪದಲ್ಲಿ ಪ್ರಕಟಿಸಿರುವ ವರದಿಗಳ ಸಂಕಲನವೇ ‘ಭೂ ಕಬಳಿಕೆ ಸಿದ್ಧಾಂತ’ ಕೃತಿ ಆಗಿದ್ದು, ಇದನ್ನು ಜಿ. ಮಹಾಂತೇಶ್ ರಚಿಸಿದ್ದಾರೆ. ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದ್ದಾರೆ.





