ನೇಪಾಳದಲ್ಲಿ ಫೇಸ್ಬುಕ್, ಎಕ್ಸ್, ಯೂಟ್ಯೂಬ್ ಸೇರಿದಂತೆ 26 ಸಾಮಾಜಿಕ ಮಾಧ್ಯಮಗಳಿಗೆ ನಿಷೇಧ ಹೇರಿಕೆ.

0
5
social-media
Advertisement

ಕಠ್ಮಂಡು: ನೇಪಾಳದಲ್ಲಿ ಫೇಸ್ಬುಕ್‌, ಎಕ್ಸ್‌, ಯೂಟ್ಯೂಬ್‌ ಸೇರಿದಂತೆ ಒಟ್ಟು 26 ಸಾಮಾಜಿಕ ಮಾಧ್ಯಮಗಳ ಮೇಲೆ ನಿಷೇಧ ಹೇರಲಾಗಿದೆ.

ಆದರೆ, ಅಧಿಕೃತವಾಗಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಪ್ಲಾಟ್‌ಫಾರ್ಮ್‌ಗಳಿಗೆ ಮಾತ್ರ ಬಳಕೆ ಅನುಮತಿಸಲಾಗುವುದು. ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ನೇಪಾಳದಲ್ಲಿ ಹಲವಾರು ಸಾಮಾಜಿಕ ಮಾಧ್ಯಮಗಳು ಸ್ಥಳೀಯ ಮಟ್ಟದಲ್ಲಿ ನೋಂದಣಿ ಮಾಡಿಸಿರಲಿಲ್ಲ. ಜಾಹೀರಾತುಗಳ ಮೇಲೂ ಸರ್ಕಾರಕ್ಕೆ ನಿಯಂತ್ರಣ ಇರದ ಹಿನ್ನೆಲೆಯಲ್ಲಿ ಈ ವಿಷಯ ಸುಪ್ರೀಂ ಕೋರ್ಟ್‌ ತನಕ ತಲುಪಿತ್ತು. ವಿಚಾರಣೆ ವೇಳೆ ಸ್ಥಳೀಯ ನೋಂದಣಿ ಪ್ರಕ್ರಿಯೆ ಪೂರೈಸುವವರೆಗೆ ಬಳಕೆಯನ್ನು ತಡೆಹಿಡಿಯುವಂತೆ ಕೋರ್ಟ್‌ ಸೂಚಿಸಿತು.

ಈ ಹಿನ್ನೆಲೆ ಸರ್ಕಾರ ದೂರಸಂಪರ್ಕ ಪ್ರಾಧಿಕಾರಕ್ಕೆ ಅಧಿಕೃತ ಪತ್ರ ರವಾನಿಸಿ, ತಕ್ಷಣದಿಂದಲೇ ಈ ಪ್ಲಾಟ್‌ಫಾರ್ಮ್‌ಗಳನ್ನು ಸ್ಥಗಿತಗೊಳಿಸಲು ಆದೇಶ ನೀಡಿದೆ.

Advertisement

LEAVE A REPLY

Please enter your comment!
Please enter your name here