ಎಲ್‌ಪಿಜಿ ಕೊರತೆ ಆತಂಕ; ಇಂಡಕ್ಷನ್ ಕುಕ್‌ಟಾಪ್‌ಗಳಿಗೆ ಹೆಚ್ಚಿದ ಬೇಡಿಕೆ

0
2
Advertisement

ಬೆಂಗಳೂರು, ಮಾ.13: ಇರಾನ್–ಇಸ್ರೇಲ್ ಹಾಗೂ ಅಮೆರಿಕ ನಡುವಿನ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಇಂಡಕ್ಷನ್ ಕುಕ್‌ಟಾಪ್‌ಗಳು ಮತ್ತು ಇತರ ವಿದ್ಯುತ್ ಅಡುಗೆ ಉಪಕರಣಗಳ ಮಾರಾಟದಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ.

ಕಳೆದ ಎರಡು ದಿನಗಳಿಂದ ಎಲೆಕ್ಟ್ರಿಕ್ ಕುಕ್‌ಟಾಪ್‌, ಇನ್‌ಫ್ರಾರೆಡ್ ಸ್ಟೌವ್ ಹಾಗೂ ಅವಕ್ಕೆ ಹೊಂದುವ ಪಾತ್ರೆಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ.

ತಮ್ಮ ಮನೆಯ ಹತ್ತಿರದ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಒಂದೇ ದಿನಕ್ಕೆ ಸುಮಾರು 70+ ಇಂಡಕ್ಷನ್ ಕುಕ್ಕರ್ ಮಾರಾಟವಾಗಿವೆ ಎಂದು ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ‌.

ನಿನ್ನೆಯಿಂದ ಅಂಗಡಿಯಲ್ಲಿ ಭಾರೀ ಜನಸಂದಣಿ ಕಂಡುಬರುತ್ತಿದೆ. ಅಂಗಡಿಗೆ ಬರುವ ಸುಮಾರು 80 ಶೇಕಡಾ ಗ್ರಾಹಕರು ಇಂಡಕ್ಷನ್ ಕುಕ್‌ಟಾಪ್‌ಗಳು ಅಥವಾ ರೈಸ್ ಕುಕ್ಕರ್‌ಗಳಂತಹ ವಿದ್ಯುತ್ ಅಡುಗೆ ಉಪಕರಣಗಳನ್ನು ಖರೀದಿಸಲು ಬರುತ್ತಿದ್ದಾರೆ ಎಂದು ಅಂಗಡಿ ಮಾಲೀಕರು ಹೇಳುತ್ತಿದ್ದಾರೆ.

ಎಲ್‌ಪಿಜಿ ಪೂರೈಕೆ ಕೊರತೆ ಮುಂದುವರಿದರೆ ವಿದ್ಯುತ್ ಅಡುಗೆ ಉಪಕರಣಗಳ ಬೇಡಿಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here