
ಗುಳೇದಗುಡ್ಡ ಮಾ.12: ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಳೇದಗುಡ್ಡ, ಆಂತರಿಕ ಭರವಸೆ ಕೋಶ (ಐಕ್ಯೂಎಸಿ) ಮತ್ತು ಕನ್ನಡ ವಿಭಾಗ ಹಾಗೂ ರಾಷ್ಟ್ರೀಯ ಸಂಶೋಧನಾ ವೇದಿಕೆ ಗುಳೇದಗುಡ್ಡ ಇವರ ಸಂಯುಕ್ತ ಆಶ್ರಯದಲ್ಲಿ ʼವಚನ ಸಾಹಿತ್ಯದಲ್ಲಿ ಕಾಯಕ ತತ್ವʼ ವಿಷಯದ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಮಾ.16 ರಂದು ಗುಳೇದಗುಡ್ಡ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಭೀಮಸೇನ ಬಿ.ಚಿಮ್ಮನಕಟ್ಟಿ, ಶಾಸಕರು, ಬಾದಾಮಿ ಮತ ಕ್ಷೇತ್ರ ಹಾಗೂ ಅಧ್ಯಕ್ಷರು, ಕಾಲೇಜು ಅಭಿವೃದ್ಧಿ ಸಮಿತಿ, ಸ.ಪ್ರ.ದ. ಕಾಲೇಜು ಗುಳೇದಗುಡ್ಡ ಅವರು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ರೇವಣಸಿದ್ದಪ್ಪ, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಳೇದಗುಡ್ಡ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಡಾ. ಅರುಣಕುಮಾರ ಗಾಳಿ, ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನವನಗರ ಬಾಗಲಕೋಟೆ ಹಾಗೂ ಡಾ. ಸಂಗಮೇಶ ಕಲ್ಯಾಣಿ, ಗೌರವಾಧ್ಯಕ್ಷರು, ರಾಷ್ಟ್ರೀಯ ಸಂಶೋಧನಾ ವೇದಿಕೆ ಗುಳೇದಗುಡ್ಡ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಎಂ.ಎಂ. ಜಮಖಾನಿ, ಸದಸ್ಯರು, ಕಾಲೇಜು ಅಭಿವೃದ್ಧಿ ಸಮಿತಿ, ಸ.ಪ್ರ.ದ. ಕಾಲೇಜು ಗುಳೇದಗುಡ್ಡ ಮತ್ತು ಪ್ರೊ. ಸಂಪತ್ತ ಲಮಾಣಿ, ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನವನಗರ ಬಾಗಲಕೋಟೆ ಹಾಗೂ ಡಾ. ಹೆಚ್.ಎಸ್. ಘಂಟಿ, ಸಾಹಿತಿಗಳು, ಗುಳೇದಗುಡ್ಡ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಪ್ರೊ. ಫಕೀರಪ್ಪ ಚನ್ನಪ್ಪ ಗೌಡ್ರ, ಮುಖ್ಯಸ್ಥರು,ಭೂಗೋಳಶಾಸ್ತ್ರ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಳೇದಗುಡ್ಡ ಅವರು ಆಶಯ ನುಡಿಗಳನ್ನು ಹೇಳಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರೊ. ಸಂತೋಷ ಎಸ್ .ಹೆಚ್, ಡಾ. ಬಸವರಾಜ ನಾಯಕ, ಡಾ. ಸಂತೋಷ ಕಾಳನ್ನವರ, ಅವರ ಉಪಸ್ಥಿತಿ ಇರಲಿದೆ.
ಬೆಳಿಗ್ಗೆ 11 ಗಂಟೆಯಿಂದ ವಿವಿಧ ವಿಚಾರಗೋಷ್ಠಿಗಳು ನಡೆಯಲಿವೆ. ಮೊದಲ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ಪ್ರಕಾಶ ನರಗುಂದ ವಹಿಸಲಿದ್ದು, ಉರಲಿಂಗಪೆದ್ದಿ ವಚನಗಳಲ್ಲಿ ಕಾಯಕ ತತ್ವ , ಡೋಹರ ಕಕ್ಕಯ್ಯನವರ ವಚನಗಳಲ್ಲಿ ಕಾಯಕ ತತ್ವ, ಮಾದರ ಚನ್ನಯ್ಯನವರ ವಚನಗಳಲ್ಲಿ ಕಾಯಕ ತತ್ವ- ವಿಷಯಗಳ ಕುರಿತು ಕ್ರಮವಾಗಿ ಪ್ರೊ. ಸಿದ್ದಲಿಂಗೇಶ ಸಜ್ಜನಶೆಟ್ಟರ, ಡಾ. ರಾಜಶೇಖರ್ ಬಿರಾದರ ಹಾಗೂ ಪ್ರೊ. ಸಂಗಮೇಶ ಬ್ಯಾಳಿ ಅವರು ಉಪನ್ಯಾಸ ನೀಡಲಿದ್ದಾರೆ.
ಎರಡನೇ ಅಧಿವೇಶನದ ಅಧ್ಯಕ್ಷತೆಯನ್ನು ಡಾ. ಸಂಗಮೇಶ ಕಲ್ಯಾಣಿ ವಹಿಸಲಿದ್ದು, ಸಕಲೇಸ ಮಾದರಸ ವಚನಗಳಲ್ಲಿ ಕಾಯಕ ತತ್ವ, ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾಯಕ ತತ್ವ, ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ವಚನಗಳಲ್ಲಿ ಕಾಯಕ ತತ್ವ- ವಿಷಯಗಳ ಕುರಿತು ಕ್ರಮವಾಗಿ, ಪ್ರೊ. ಚಂದ್ರಶೇಖರ ಹೆಗಡೆ, ಡಾ. ರುದ್ರೇಶ ಮೇಟಿ ಹಾಗೂ ಡಾ. ಚಂದ್ರಶೇಖರ ಕಾಳನ್ನವರ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಅಧ್ಯಾಪಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಹಿಸಲಿದ್ದಾರೆ.





