ನಿರುದ್ಯೋಗ – ಅರ್ಥಿಕ ಕುಸಿತ ಹಿನ್ನಲೆ; ಇರಾನ್ ನಲ್ಲಿ ಭಾರಿ ಪ್ರತಿಭಟನೆ!

0
37
Advertisement

ಟೆಹ್ರಾನ್, ಜ.02: ದೇಶ ಎದುರಿಸುತ್ತಿರುವ ಆರ್ಥಿಕ‌ ಸಂಕಷ್ಟದಿಂದ ಬೇಸತ್ತು, ಒಂದು ವಾರದಿಂದ ಇರಾನ್‌ನಲ್ಲಿ ಭಾರಿ ಪ್ರತಿಭಟನೆಗಳು ಆರಂಭವಾಗಿದೆ. ದೇಶದ ಹಲವು ಭಾಗಗಳಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೊದಲು ರಾಜಧಾನಿ ಟೆಹ್ರಾನ್‌ನಲ್ಲಿ ಆರಂಭವಾದ ಪ್ರತಿಭಟನೆಗಳು, ಮಂಗಳವಾರಕ್ಕೆ ಕನಿಷ್ಠ ಹತ್ತು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸೇರಿಕೊಂಡ ಬಳಿಕ ಇತರ ನಗರಗಳಿಗೂ ವಿಸ್ತರಿಸಿವೆ. ದೇಶದಲ್ಲಿ ಹೆಚ್ಚುತ್ತಿರುವ ಬೆಲೆಯೇರಿಕೆ, ನಿರುದ್ಯೋಗ ಮತ್ತು ಆರ್ಥಿಕ ಕುಸಿತವೇ ಈ ಪ್ರತಿಭಟನೆಗಳಿಗೆ ಮುಖ್ಯ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಡಿಸೆಂಬರ್‌ನಲ್ಲಿ ಇರಾನ್‌ನ ಬೆಲೆಯೇರಿಕೆ ಪ್ರಮಾಣ ಅಧಿಕೃತವಾಗಿ 42.5 ಶೇಕಡಕ್ಕೆ ಏರಿಕೆಯಾಗಿದೆ. ಭಾನುವಾರ ದೇಶಿ ಕರೆನ್ಸಿಯ ಮೌಲ್ಯ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ವ್ಯಾಪಾರಿಗಳು ಬೀದಿಗೆ ಇಳಿದಿದ್ದು, ಪ್ರತಿಭಟನೆಗಳಿಗೆ ಚಾಲನೆ ನೀಡಿತು.

ಕಳೆದ ಕೆಲವು ದಿನಗಳಿಂದ ವ್ಯಾಪಾರಿಗಳು, ಅಂಗಡಿ ಮಾಲೀಕರು ಹಾಗೂ ಹಲವು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಪ್ರಮುಖ ಬಜಾರ್‌ಗಳು ಮತ್ತು ಮಾರುಕಟ್ಟೆಗಳು ಬಂದ್ ಆಗಿವೆ. ದೇಶದ ಬಹುಭಾಗದಲ್ಲಿ ದಿನನಿತ್ಯದ ಚಟುವಟಿಕೆಗಳು ಸ್ಥಗಿತಗೊಂಡಿವೆ.

Advertisement

LEAVE A REPLY

Please enter your comment!
Please enter your name here