Advertisement 

ಬಳ್ಳಾರಿ: ಶರಣ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನವನ್ನು ಆರಂಭಿಸಲಾಗಿದೆ. ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಯಿಂದ ಸೆಪ್ಟೆಂಬರ್ 1ರಂದು ಈ ಅಭಿಯಾನಕ್ಕೆ ಚಾಲನೆ ದೊರೆತಿದ್ದು, ಇದು ಸಂಪೂರ್ಣ 30 ದಿನಗಳ ಕಾಲ ನಡೆಯಲಿದೆ.
ಈ ಅಭಿಯಾನದ ಅಂಗವಾಗಿ ರಥೋತ್ಸವ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಬಸವಣ್ಣನವರ ವಚನಗಳು ಮತ್ತು ಶರಣ ಸಂಸ್ಕೃತಿಯನ್ನು ಮನೆ ಮನೆಗೆ ತಲುಪಿಸುವುದೇ ಈ ಕಾರ್ಯಕ್ರದ ಮುಖ್ಯ ಉದ್ದೇಶವಾಗಿದೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿ.ಎಸ್. ಪನ್ನರಾಜ್ ಅವರು, “ಸೆಪ್ಟೆಂಬರ್ 6ರಂದು ರಥಯಾತ್ರೆ ಬಳ್ಳಾರಿ ನಗರಕ್ಕೆ ಆಗಮಿಸುತ್ತಿದ್ದು, ಬೃಹತ್ ಮೆರವಣಿಗೆಯ ಮೂಲಕ ಬಸವ ಸಂಸ್ಕೃತಿಯ ಸಾರವನ್ನು ಜನರಿಗೆ ತಲುಪಿಸಲಾಗುವುದು” ಎಂದು ತಿಳಿಸಿದ್ದಾರೆ.
Advertisement 
