ಬಳ್ಳಾರಿ: ಫೆ.07ಕ್ಕೆ ಎಸ್. ಆರ್.‌ ಶರಣ ಕುಮಾರ್‌ ಅವರ ‘ನಿನ್ನ ನೆನಪಲಿ’ ಕೃತಿ ಲೋಕಾರ್ಪಣೆ

0
4
Advertisement

ಬಳ್ಳಾರಿ, ಫೆ.06: ಕನ್ನಡ ಸಾಹಿತ್ಯ ಪರಿಷತ್ತು, ಅಖಂಡ ಬಳ್ಳಾರಿ ಜಿಲ್ಲಾ ಘಟಕ ಹಾಗೂ ವಿವೇಕ ಪುಸ್ತಕ ಬಳ್ಳಾರಿ ಇವರ ಸಹಯೋಗದಲ್ಲಿ ಎಸ್.ಆರ್. ಶರಣ‌ ಕುಮಾರ್ ಅವರ ಪ್ರಥಮ ಹನಿಗವನ ಸಂಕಲನ ʼನಿನ್ನ ನೆನಪಲಿʼ ಕೃತಿ ಲೋಕಾರ್ಪಣೆಯ ಸಮಾರಂಭವು ಫೆಬ್ರವರಿ 7ರಂದು ಸಂಜೆ 5.30ಕ್ಕೆ ನಗರದ ಕನ್ನಡ ಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ವಿಧಾನ ಪರಿಷತ್‌ ಸದಸ್ಯರಾದ ವೈ. ಎಂ. ಸತೀಶ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೆ.ಎಂ. ಶಿವಮೂರ್ತಿ, ಅಧ್ಯಕ್ಷರು ಹ್ಯಾಲಿಸ್‌ ಬ್ಲೂ ಸ್ಟೀಲ್ಸ್‌, ಪ್ರೈ.ಲಿ. ವಹಿಸಲಿದ್ದಾರೆ. ಬಳ್ಳಾರಿಯ ಮಾಜಿ ಶಾಸಕರಾದ ಜಿ. ಸೋಮಶೇಖರ ರೆಡ್ಡಿ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಡಾ. ನಿಷ್ಠಿ ರುದ್ರಪ್ಪ, ಜಿಲ್ಲಾಧ್ಯಕ್ಷರು, ಕ.ಸಾ.ಪ. ಬಳ್ಳಾರಿ- ವಿಜಯನಗರ ಇವರು ಕೃತಿ ಪರಿಚಯ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ, ಪಂಪನ ಗೌಡ ಮೇಲ್ಸೀಮೆ, ಸರ್ಕಾರದ ಜಂಟಿ ಕಾರ್ಯದರ್ಶಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಬೆಂಗಳೂರು, ಎಸ್.‌ ಆರ್. ರಾಜೇಶ್ವರಿ, ವಿವೇಕ ಪುಸ್ತಕ ಪ್ರಕಾಶಕರು ಬಳ್ಳಾರಿ, ಡಾ. ಎಸ್‌. ಆರ್.‌ ಚಂದ್ರಶೇಖರ್‌ ಪಾಟೀಲ್‌, ಬಿ.ಹೆಚ್.ಸಿ ಆಸ್ಪತ್ರೆ ಬಳ್ಳಾರಿ, ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸಾಹಿತ್ಯ, ಸಂಸ್ಕೃತಿ ಹಾಗೂ ಸಮಕಾಲೀನ ಚಿಂತನೆಗಳ ಕುರಿತಾದ ವಿಚಾರ ವಿನಿಮಯ ನಡೆಯಲಿದ್ದು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

Advertisement

LEAVE A REPLY

Please enter your comment!
Please enter your name here