ನಿರ್ಧಾರ ಮತ್ತು ಪರಿಶ್ರಮ

0
4
Advertisement

ಲೇಖಕರು: ಗಣೇಶ ರಾಮಚಂದ್ರ ಮಾಂಡ್ರೆ
ಸಾಹಿತಿಗಳು
ಅರಿವು ಬೋಧಿ ಪ್ರಕಾಶನ

ಒಂದು ಹಳ್ಳಿಯಲ್ಲಿ ಚಿನ್ನು ಎಂಬ ಹುಡುಗ ಇದ್ದ. ಅವನು ತುಂಬಾ ಕುತೂಹಲ ಮತ್ತು ಕನಸುಗಳನ್ನಿಟ್ಟುಕೊಂಡವನಾಗಿದ್ದ.
ಒಂದು ದಿನ ಶಾಲೆಯ ಗುರುಗಳು ಹೇಳಿದರು:
“ಮಕ್ಕಳೇ, ಮುಂದಿನ ತಿಂಗಳು ವಿಜ್ಞಾನ ಪ್ರದರ್ಶನ ಇದೆ.”
ಚಿನ್ನು ಖುಷಿಯಾದ. “ನಾನು ಗೆಲ್ಲಬೇಕು!” ಎಂದು ಅವನು ತೀರ್ಮಾನ ಮಾಡಿದ.
ಅದು ಅವನ ಒಳ್ಳೆಯ ನಿರ್ಧಾರ. ಆದರೆ ತೀರ್ಮಾನ ಮಾತ್ರ ಸಾಕಾಗಲಿಲ್ಲ.
ಪ್ರತಿ ದಿನ ಶಾಲೆಯಿಂದ ಬಂದ ಮೇಲೆ ಚಿನ್ನು ಪುಸ್ತಕ ಓದಿದ, ಪ್ರಯೋಗ ಮಾಡುತ್ತಿದ್ದ, ಕೆಲವೊಮ್ಮೆ ವಿಫಲವಾದರೂ ಮತ್ತೆ ಪ್ರಯತ್ನಿಸಿದ.
ಇದು ಅವನ ಪರಿಶ್ರಮ. ಪ್ರದರ್ಶನದ ದಿನ ಬಂತು. ಚಿನ್ನು ಮಾಡಿದ ಪ್ರಯೋಗ ಎಲ್ಲರಿಗೂ ಇಷ್ಟವಾಯಿತು.
ಅವನು ಮೊದಲ ಬಹುಮಾನ ಗೆದ್ದ!
ಗುರುಗಳು ಹೇಳಿದರು:“ಚಿನ್ನು, ನೀನು ಹೇಗೆ ಗೆದ್ದೆ?”
ಚಿನ್ನು ನಗುತ್ತ ಹೇಳಿದ: “ಒಳ್ಳೆಯ ನಿರ್ಧಾರ ಅರ್ಧ ನನ್ನನ್ನು ಗೆಲ್ಲಿಸಿತು, ಮತ್ತೊಂದು ಅರ್ಧ ನನ್ನ ಪರಿಶ್ರಮ ಗೆಲ್ಲಿಸಿತು.”
ಅಂದಿನಿಂದ ಎಲ್ಲಾ ಮಕ್ಕಳು ಕಲಿತರು. ಯಶಸ್ಸು ಬರೋದು ತೀರ್ಮಾನ ಮತ್ತು ಪರಿಶ್ರಮ ಒಟ್ಟಿಗೆ ಬಂದಾಗ ಮಾತ್ರ.

Advertisement

LEAVE A REPLY

Please enter your comment!
Please enter your name here