‘ದಿ ಅಲ್ಚೆಮಿಸ್ಟ್’: ಕನಸು, ಪ್ರಯಾಣ ಮತ್ತು ಬದುಕಿನ ಸರಳ ಪಾಠಗಳು

0
4
Advertisement

ಪುಸ್ತಕ ವಿಮರ್ಶೆ: ಅಕ್ಷತಾ ಕೊಪ್ಪಳ

ಜಗತ್ತಿನ ಪ್ರಸಿದ್ಧ ಕೃತಿ ‘ದಿ ಅಲ್ಚೆಮಿಸ್ಟ್’ (The Alchemist) ಓದುಗರ ಮನಸ್ಸನ್ನು ಸೆಳೆಯುವ ಪ್ರೇರಣಾದಾಯಕ ಕಾದಂಬರಿಯಾಗಿದೆ. ಖ್ಯಾತ ಲೇಖಕ ಪೌಲೊ ಕೊಯಿಲ್ಹೊ( Paulo Coelho) ಅವರ ಈ ಕೃತಿ, ಜೀವನದ ಅರ್ಥವನ್ನು ಹುಡುಕುವ ಒಬ್ಬ ಯುವಕನ ಕಥೆಯನ್ನು ಸರಳವಾಗಿ ಹೇಳುತ್ತದೆ. ಈ ಕೃತಿ ಓದುವಾಗ ಮನಸ್ಸಿಗೆ ನಾಟುವ ಅನೇಕ ವಿಚಾರಗಳು ತಿಳಿಯುತ್ತವೆ.

‘ದಿ ಅಲ್ಚೆಮಿಸ್ಟ್’ ಕಥೆಯು ತನ್ನ ಕನಸನ್ನು ಸಾಧಿಸಲು ಹೊರಡುವ ಒಬ್ಬ ಹುಡುಗನ ಬಗ್ಗೆ ಇರುವಂತದ್ದು. ಅವನು ಈಜಿಪ್ಟ್‌ನ ಪಿರಮಿಡ್‌ಗಳ ಬಳಿ ಒಂದು ಖಜಾನೆ ಇದೆ ಎಂದು ಕನಸು ಕಾಣುತ್ತಾನೆ. ಒಬ್ಬ ಜ್ಯೋತಿಷಿ ಅವನಿಗೆ ಅಲ್ಲೊಂದು ಖಜಾನೆ ಇದೆ ಮತ್ತು ಅದನ್ನು ಹುಡುಕುವುದು ನಿನ್ನ ವಿಧಿ ಎಂದು ಹೇಳುತ್ತಾನೆ.

ಇದರಿಂದ ಪ್ರೇರಿತನಾದ ಹುಡುಗನು ತನ್ನ ಊರನ್ನು ಬಿಟ್ಟು, ಕುರಿಗಾಹಿಯಾಗಿ ಇದ್ದ ಜೀವನದಿಂದ ಹೊರಬಂದು, ಖಜಾನೆಯನ್ನು ಹುಡುಕಲು ದೂರ ಪ್ರಯಾಣ ಆರಂಭಿಸುತ್ತಾನೆ. ಈ ಪ್ರಯಾಣದಲ್ಲಿ ಅವನು ಹಲವರನ್ನು ಭೇಟಿ ಮಾಡುತ್ತಾನೆ. ಅವನು ಕುರಿಗಳನ್ನು ಸಾಕುವುದರಿಂದಲೇ ಎಲ್ಲವನ್ನೂ ಕಲಿಯಬಹುದು ಎಂದು ಭಾವಿಸಿದ್ದರೂ, ಈ ಭೇಟಿಗಳು ಅವನಿಗೆ ಜೀವನದ ಇನ್ನಷ್ಟು ಮಹತ್ವದ ಪಾಠಗಳನ್ನು ಕಲಿಸುತ್ತವೆ.

ಈ ಪುಸ್ತಕದ ವಿಶೇಷತೆ ಎಂದರೆ, ಇದರಲ್ಲಿ ಅಡಕವಾಗಿರುವ ಅರ್ಥಪೂರ್ಣ ಸಂದೇಶಗಳು. ಹುಡುಗನು ತನ್ನ ಪ್ರಯಾಣದಲ್ಲಿ ಕಲಿಯುವ ಪಾಠಗಳು ನಮಗೂ ಜೀವನದಲ್ಲಿ ಉಪಯೋಗವಾಗುವಂತಿವೆ. ಇದು ಚಿಕ್ಕ ಕಥೆಯಾಗಿದ್ದರೂ, ಜೀವನವನ್ನು ಹೇಗೆ ನೋಡಬೇಕು ಎಂಬುದನ್ನು ಕಲಿಸುತ್ತದೆ.

ಒಟ್ಟಿನಲ್ಲಿ, ‘ದಿ ಅಲ್ಚೆಮಿಸ್ಟ್’ ಒಂದು ಸರಳ ಕಥೆಯಾದರೂ, ಕನಸುಗಳನ್ನು ಸಾಧಿಸಲು ಧೈರ್ಯ ನೀಡುವ ಹಾಗೂ ಜೀವನದ ಅರ್ಥ ತಿಳಿಸುವ ಒಳ್ಳೆಯ ಕೃತಿ.

Advertisement

LEAVE A REPLY

Please enter your comment!
Please enter your name here