ಗಲ್ಲಾಪೆಟ್ಟಿಗೆ ದೋಚಿದ್ದ ಪುನೀತ್‌ ರಾಜ್ ಕುಮಾರ್‌ ಅಭಿನಯದ ʼಆಕಾಶ್‌ʼ ಮತ್ತೆ ತೆರೆಗೆ!

0
29
Advertisement

ಬೆಂಗಳೂರು, ಜ.05: ಸ್ಯಾಂಡಲ್‌ವುಡ್‌ನ ‘ಪವರ್ ಸ್ಟಾರ್’ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಮತ್ತೊಮ್ಮೆ ಸಂತಸದ ಸುದ್ದಿ ಲಭಿಸಿದೆ. ಪುನೀತ್ ಅಭಿನಯದ ಜನಪ್ರಿಯ ಚಿತ್ರ ‘ಆಕಾಶ್’ ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬ ಮಾರ್ಚ್ 17ರ ಅಂಗವಾಗಿ, ಈ ಚಿತ್ರವನ್ನು ಮಾರ್ಚ್ 13ರಂದು ಮರು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈ ಕುರಿತು ಪುನೀತ್ ಅವರ ಪತ್ನಿ ಅಶ್ವಿನಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ʼನೀನೆ ನೀನೆ ನನಗೆಲ್ಲಾ ನೀನೆ… ಮಾತು ನೀನೆ ಮನಸೆಲ್ಲಾ ನೀನೆ’ ಎಂಬ ಭಾವನಾತ್ಮಕ ಅಡಿಬರಹದೊಂದಿಗೆ ‘ಆಕಾಶ್’ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡಿರುವ ಅಶ್ವಿನಿ, ಚಿತ್ರದ ಮರು ಬಿಡುಗಡೆಯ ಸುದ್ದಿ ತಿಳಿಸಿ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದ್ದಾರೆ.

ಪುನೀತ್ ಅವರ ಅಭಿನಯ, ಹಾಡುಗಳು ಹಾಗೂ ಕಥಾವಸ್ತುವಿನಿಂದ ಗಮನ ಸೆಳೆದಿದ್ದ ‘ಆಕಾಶ್’ ಸಿನಿಮಾ ಮರು ಬಿಡುಗಡೆಯೊಂದಿಗೆ ಮತ್ತೊಮ್ಮೆ ಅಭಿಮಾನಿಗಳ ಹೃದಯ ಗೆಲ್ಲಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Advertisement

LEAVE A REPLY

Please enter your comment!
Please enter your name here