ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ : ಡಾ. ರಹಮತ್ ತರೀಕೆರೆ

0
122
Advertisement

ಡಾ. ಎ ನಂಜಪ್ಪ ವೇದಿಕೆ :-
ಬಳ್ಳಾರಿ, ಆಗಸ್ಟ್ 23 : ಕನ್ನಡ ಭಾಷೆಯಲ್ಲಿ ವೈದ್ಯಕೀಯ ಸಾಹಿತ್ಯವನ್ನು ಬೆಳೆಸುವ ಉದ್ದೇಶದಿಂದ, ರಾಜ್ಯದ ವೈದ್ಯರು ಲೇಖಕರಾಗಿ ಮಾಡುತ್ತಿರುವ ಸೃಜನಾತ್ಮಕ ಕೆಲಸವನ್ನು ಗೌರವಿಸುವ ಉದ್ದೇಶದಿಂದ ಹಾಗೂ ಹೊಸ ಪೀಳಿಗೆಯ ವೈದ್ಯರಲ್ಲಿ ಸಾಹಿತ್ಯ ಆಸಕ್ತಿ ಮೂಡಿಸಬೇಕಾದ ಅಗತ್ಯವಿದೆಯೆಂದು ಡಾ. ರಹಮತ್ ತರೀಕೆರೆ ಅಭಿಪ್ರಾಯಪಟ್ಟರು.

ಅವರು ಇಂದು ನಗರದ ಡಾಕ್ಟರ್ ರಾಜಕುಮಾರ್ ರಸ್ತೆಯ ಬಿಪಿಎಸ್‌ಸಿ ಶಾಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ಮತ್ತು ಕನ್ನಡ ವೈದ್ಯ ಬರಹಗಾರರ ಸಮಿತಿ ವತಿಯಿಂದ ಎರಡು ದಿನಗಳ ಕನ್ನಡ ವೈದ್ಯಕೀಯ ಬರಹಗಾರರ ಆರನೇ ಸಮ್ಮೇಳನದ ಉದ್ಘಾಟಿಸಿ ಮಾತನಾಡಿ, ಭಾರತೀಯ ವೈದ್ಯಕೀಯ ಸಂಘ – ಕನ್ನಡ ರಾಜ್ಯ ಶಾಖೆ ಹಾಗೂ ಕನ್ನಡ ವೈದ್ಯ ಬರಹಗಾರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ “ವೈದ್ಯಕೀಯ ಸಾಹಿತ್ಯ – ಜನಪದ ಸಾಹಿತ್ಯ” ಎಂಬ ಉದ್ದೇಶದಡಿಯಲ್ಲಿ 6ನೇ ರಾಜ್ಯ ಸಮ್ಮೇಳನ ಬಳ್ಳಾರಿಯಲ್ಲಿ ಆಯೋಜಿಸಲಾಗಿದೆ ಇದರಿಂದ ವೈದ್ಯಕೀಯ ಯುವ ಬರಹಗಾರರಿಗೆ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಳ್ಳಲು ಅನುಕೂಲವಾಗಲಿದೆ ಎಂದರು.

ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ಮೊದಲನೇ ದಿನವಾದ ಹಿಂದೂ ಸುಮಾರು 50ಕ್ಕೂ ಹೆಚ್ಚು ವೈದ್ಯ-ಲೇಖಕರು ಭಾಗವಹಿಸಿ, ಸಾಹಿತ್ಯ, ಕಾವ್ಯವಾಚನ ಕಾರ್ಯಕ್ರಮಗಳು ಜರುಗಿದವು.
ಮುಂಜಾನೆ ಎಂಟು ಗಂಟೆಗೆ ರಘುವೀರ್ ಆರ್ತೋ ಸೆಂಟರ್ನಿಂದ ಆರಂಭವಾದ ಕನ್ನಡ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆ ಬೆಸಗರಹಳ್ಳಿ ರಾಮಣ್ಣ ಮಹಾದ್ವಾರದ ಮೂಲಕ ಡಾಕ್ಟರ್ ಎ ನಂಜಪ್ಪ ಮುಖ್ಯ ವೇದಿಕೆಯನ್ನು ತಲುಪಿತು.
9ಕ್ಕೆ ಆರಂಭವಾದ ಗೋಷ್ಠಿ ಒಂದರಲ್ಲಿ ಕನ್ನಡ ವೈದ್ಯ ಸಾಹಿತ್ಯ ಮುಂದೇನು ಮಾರ್ಗಸೂಚಿಗಳು ಎಂಬ ವಿಷಯದ ಕುರಿತು ಡಾ. ಸಿ.ಆರ್ ಚಂದ್ರಶೇಖರ್
ಕನ್ನಡ ವೈದ್ಯ ಸಾಹಿತ್ಯ ಮೈಲುಗಳು ಎಂಬ ವಿಷಯದ ಕುರಿತು ಡಾ. ಎಸ್ ಪಿ ಯೋಗಣ್ಣ ಇವರುಗಳು ನಡೆಸಿಕೊಟ್ಟರು.
ನಂತರ ಶ್ರೇಷ್ಠ ವೈದ್ಯಕೀಯ ಹಸ್ತ ಪ್ರತಿ ಶಾಸ್ತ್ರ ಮತ್ತು ಕೃತಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಸಮಾನಾಂತರ ವೇದಿಕೆಯಲ್ಲಿ ಕಿರಿಯ ವೈದ್ಯರಲ್ಲಿ ಒತ್ತಡದ ಕಿರಿಕಿರಿ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾಕ್ಟರ್ ಹರೀಶ್ ದೇಲಂತಬೆಟ್ಟು ವಿಷಯವನ್ನು ಪ್ರಸ್ತುತಪಡಿಸಿದರು. ಅಧ್ಯಕ್ಷತೆಯನ್ನು ಡಾ. ಕೊಟ್ರೇಶ್ ಎಸ್ ಮತ್ತು ಸುಪ್ರತಾ ವಿನಯ್ ಶ್ರೀನಿವಾಸ್ ಇವರುಗಳ ಉಸ್ತುವಾರಿಯಲ್ಲಿ ಡಾಕ್ಟರ್ ಪರಸಪ್ಪ ಬಂದ್ರಕಳ್ಳಿ, ಡಾ. ದಿವ್ಯ ವೇದಿಕೆಯನ್ನು ನಿರ್ವಹಿಸಿದರು.

ಗೋಷ್ಠಿ ಎರಡರಲ್ಲಿ ಅನ್ಯ ಭಾಷೆಗಳಲ್ಲಿ ವೈದ್ಯ ಸಾಹಿತ್ಯ ವಿಷಯದ ಕುರಿತು ಡಾಕ್ಟರ್ ಅನಿಲ್ ಮಡಿಕೆ ಮರಾಠಿ ವೈದ್ಯ ಸಾಹಿತ್ಯ ಮತ್ತು ಡಾ. ಅಲ್ಲೂರಿ ವಿಜಯಲಕ್ಷ್ಮಿ ತೆಲುಗು ವೈದ್ಯ ಸಾಹಿತ್ಯದ ಕುರಿತು ವಿಷಯವನ್ನು ಮಂಡಿಸಿದರು.
ಗೋಷ್ಟಿ ಮೂರರಲ್ಲಿ ಪ್ರಕಾಶಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ತಟ್ಟಂತ ಹೇಳಿ ಖ್ಯಾತಿಯ ಡಾಕ್ಟರ್ ನಾ ಸೋಮೇಶ್ವರ ನಡೆಸಿಕೊಟ್ಟರು ಸಂವಾದಕರಾಗಿ ಡಾ.ಮಧುಸೂದನ್ ಕಾರಿಗನೂರು, ಅಭಿನವ ಪ್ರಕಾಶನದ ರವಿಕುಮಾರ್ ವಿಕ್ರಂ ಪ್ರಕಾಶನದ ಮೋದ ಹರಿಪ್ರಸಾದ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ವೇದಿಕೆಯ ಉಸ್ತುವಾರಿಯನ್ನು ಡಾಕ್ಟರ್ ಶ್ರೀನಿವಾಸ್ ಹರಪ್ಪನಹಳ್ಳಿ, ನಿರ್ವಹಣೆಯನ್ನು ಡಾಕ್ಟರ್ ವಿಶ್ವನಾಥ್ ಬಿ ಇವರುಗಳು ನಡೆಸಿಕೊಟ್ಟರು.
ಗೋಷ್ಠಿ ನಾಕರಲ್ಲಿ ಕನ್ನಡ ನಾಡು ನುಡಿ ಜಲ ಎಂಬ ವಿಷಯದ ಕುರಿತು ರಸಪ್ರಶ್ನೆ ಸ್ಪರ್ಧೆಯನ್ನು ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ನಡೆಸಲಾಯಿತು. ಈ ವೇದಿಕೆಯ ಅಧ್ಯಕ್ಷತೆಯನ್ನು ಡಾಕ್ಟರ್ ರೇಣುಕಾ ಮಂಜುನಾಥ್, ಕ್ವಿಜ್ ಮಾಸ್ಟರ್ ಡಾ. ಶ್ರೀಕಾಂತ್ ಹೆಗಡೆ ಭಾಗವಹಿಸಿದ್ದರು. ವೇದಿಕೆಯ ಉಸ್ತುವಾರಿಯನ್ನು ಡಾಕ್ಟರ್ ವಿನಯ ಶ್ರೀನಿವಾಸ್ ನಿರ್ವಹಣೆಯನ್ನು ದಿನೇಶ್ ಗುಡಿ ಇವರಗಳು ನಡೆಸಿಕೊಟ್ಟರು.ಇಂದು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಯಲಾಟ ಮತ್ತು ಜ್ಯೋತಿ ಕುಣಿತ ಕಾರ್ಯಕ್ರಮಗಳು ಜರುಗಲಿವೆ ಎಂದು ಡಾಕ್ಟರ್ ದಿವಾಕರ್ ಗಡ್ಡಿ ತಿಳಿಸಿದರು.

Advertisement

LEAVE A REPLY

Please enter your comment!
Please enter your name here