Welcome to BP News Karnataka   Click to listen highlighted text! Welcome to BP News Karnataka
Friday, May 9, 2025
HomeDistrictsBallariಗಜಲ್ ರಚನೆ ನಿಯಮಗಳನ್ನು ದಾಟಿ ಹೊರಬೇರಬೇಕು ಅದು ಮಾತ್ರ ನಿಜವಾದ ಗಜಲ್ ಆಗಲು ಸಾಧ್ಯ...

ಗಜಲ್ ರಚನೆ ನಿಯಮಗಳನ್ನು ದಾಟಿ ಹೊರಬೇರಬೇಕು ಅದು ಮಾತ್ರ ನಿಜವಾದ ಗಜಲ್ ಆಗಲು ಸಾಧ್ಯ : ಡಾ.ವೈ. ಸಿ. ಯೋಗಾನಂದರೆಡ್ಡಿ

ಬಳ್ಳಾರಿ : ಗಜಲ್ ಅರಬ್ಬಿಯಲ್ಲಿ ನಲ್ಲಿ ಹುಟ್ಟಿ, ಇರಾನನಲ್ಲಿ ಬೆಳೆದು ಕನ್ನಡದ ನೆಲದಲ್ಲಿ ಅರಳಿ ಕಂಪು ಸೂಸುತ್ತಿರುವುದು ಸಂತೋಷದ ಸಂಗತಿ ಎಂದು ಕರ್ನಾಟಕ ವೈದ್ಯಕೀಯ ಪರಿಷತ್ತಿನ ಅಧ್ಯಕ್ಷರಾದ ಡಾ. ವೈ. ಸಿ. ಯೋಗಾನಂದ ರೆಡ್ಡಿ ಅಭಿಪ್ರಾಯ ಪಟ್ಟರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಜುನೇದ್ ಪ್ರಕಾಶನ ಆಯೋಜಿಸಿದ್ದ ದಸ್ತಗೀರಸಾಬ್ ದಿನ್ನಿ ವಿರಚಿತ ‘ಮಧು ಬಟ್ಟಲಿನ ಗುಟುಕು ‘ ಗಜಲ್ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿ, ರಾತೋ ರಾತ್ರಿ ಮತ್ತು ಒಂದು ದಿನಕ್ಕೆ ನಾಲ್ಕೈದು ಗಜಲ್ ಗಳನ್ನು ರಕ್ಷಿಸುತ್ತೇನೆ ಎಂದು ಕೆಲವರು ಕಂಪ್ಯೂಟರ್ ಮುಂದೆ ಕುಳಿತಿರುತ್ತಾರೆ ಆದರೆ ಅದು ನಿಜವಾದ ಗಜಲ್ ಆಗಲು ಸಾಧ್ಯವಿಲ್ಲ, ಮಾನಸಿಕ ಹೋಯ್ದಾಟ ತುಮುಲ ಅನುಭವಿಸುವ ಯಾತನೆ ಮತ್ತು ನೋವಿನಿಂದ ಮಾತ್ರ ನಿಜವಾದ ಗಜಲ್ ಹುಟ್ಟಲು ಸಾಧ್ಯ ಇದಕ್ಕೆ ಹೆಚ್ಚಿನ ಸಮಯ ಅವಕಾಶ ಬೇಕಾಗುತ್ತದೆ, ಫೇಸ್ಬುಕ್ ನಲ್ಲಿ ಬರುವ ಪದ್ಯಗಳು ಗಜಲ್ ಆಗಲು ಸಾಧ್ಯವಿಲ್ಲ ಎಂದರು. ಮಧುರ ಮತ್ತು ಮೋಹಕವಾದ ಈ ಕಾವ್ಯರೂಪಕ್ಕೆ ಛಂದೋಲಯದ ಹಲವು ಬಂಧನಗಳಿವೆ. ಉರ್ದು ಕಾವ್ಯದ ಈ ರೂಪವನ್ನು ಕನ್ನಡ ಭಾಷೆಯ ಲಯಕ್ಕೆ ಒಗ್ಗಿಸಿಕೊಂಡು ಬರೆಯುತ್ತಿರುವುದು ಆಶಾದಾಯಕವಾದ ಬೆಳವಣಿಗೆ ಎಂದರು. ಕೃತಿ ಕುರಿತು ಮಾತನಾಡಿದ ಜಿಲ್ಲೆಯ ಹಿರಿಯ ಗಜಲ್ ಕವಿ ಎಂದೇ ಪ್ರಖ್ಯಾತರಾದ ಸಿದ್ಧರಾಮ ಹಿರೇಮಠ್, ಗಜಲ್ ಎಂದರೆ ಅದೊಂದು ತುಡಿಯುವ ಅತೃಪ್ತ ಮನಸ್ಥಿತಿ. ಕಡಲಿನಂತೆ ಹೊಯ್ದಾಡುವ ಚಿಪ್ಪಿನೊಳಗಿನ ಮೃದ್ವಂಗಿ ಆ ಕಪ್ಪೆ ಚಿಪ್ಪಿನೊಳಗಿಂದ ಮುತ್ತಿನಂತ ಗಜಲ್ ಹುಟ್ಟಲು ಸಾಧ್ಯ ಎಂದರು. ಮೊದಲು ಭಾಷೆ ನಂತರ ವ್ಯಾಕರಣ. ಮೊದಲು ಭಾವ ನಂತರ ಛಂದಸ್ಸು. ಬಾಣಕ್ಕೆ ಸಿಲುಕಿ ಬದುಕಲು ಒದ್ದಾಡುವ ಜಿಂಕೆಯ ತಳಮಳದ ಸ್ಥಿತಿಯೇ ಗಜಲ್.ಪ್ರೇಮ ಎಂದರೆ ಔನತ್ಯ,ಆಧ್ಯಾತ್ಮ ಎಂದು ವಿಶ್ಲೇಷಿಸಿದರು. ಪ್ರಧಾನವಾಗಿ ದಿನ್ನಿಯವರ ಗಜಲುಗಳಲ್ಲಿ ಪ್ರೇಮ, ವ್ಯಥೆ,ಅಳಲು ತಳಮಳ, ಸುಡುವ ವರ್ತಮಾನ ಮಡುಗಟ್ಟಿದೆ. ಇಲ್ಲಿನ ಗಜಲುಗಳು ಓದುಗರಿಗೆ ನಿರಾಸೆಯನ್ನು ಉಂಟುಮಾಡುವುದಿಲ್ಲ ಎನ್ನುವುದೇ ಸಂಕಲನದ ಹೆಚ್ಚುಗಾರಿಕೆ ಎಂದರು. ಇತ್ತೀಚಿಗೆ ಬಹಪಾಲು ಬರಹಗಾರರು ಗಜಲಿನ ರಚನೆಗೆ ತೊಡಗಿದ್ದು ಅದರ ಛಂಧೋಲಯವನ್ನು ಸರಿಯಾಗಿ ತಿಳಿದುಕೊಳ್ಳದೆ ಬರೆಯುತ್ತಿರುವುದು ಸುಂದರ ಹೆಣ್ಣನ್ನು ಅತ್ಯಾಚಾರ ಮಾಡಿದಂತಾಗಿದೆ ಎಂದು ಆತಂಕವನ್ನು ವ್ಯಕ್ತಪಡಿಸಿದರು. ಮುಖ್ಯ ಅತಿಥಿ ಇಟಿಗಿ ಭೀಮನಗೌಡ ಶಾಂತರಸ ಹೆಂಬೇರಾಳರು ಕನ್ನಡ ಗಜಲ್ ಸಾಹಿತ್ಯಕ್ಕೆ ಒಂದು ಅಡಿಪಾಯವನ್ನು ಹಾಕಿ ಪರಂಪರೆಯನ್ನು ನಿರ್ಮಾಣ ಮಾಡಿದ್ದಾರೆ ಎಂದು ಸ್ಮರಿಸಿದರು. ಕವಿ ದಸ್ತಗೀರಬ್ ದಿನ್ನಿ ಗಜಲಿನ ರಚನೆಗೆ ಕಾರಣವಾದ ರಾಯಚೂರಿನ ಪರಿಸರವನ್ನು ನೆನಪಿಸಿಕೊಳ್ಳುತ್ತಲೇ ಇಲ್ಲಿನ ರಚನೆಗಳಲ್ಲಿ ನನ್ನ ಪ್ರಾಮಾಣಿಕ ಪ್ರಯತ್ನವಿದೆ. ಆಸಕ್ತಿ ಮತ್ತು ಪ್ರೀತಿ ಇದೆ ಇನ್ನೂ ಒಳ್ಳೆಯ ಗಜಲುಗಳನ್ನು ರಚಿಸಬೇಕೆಂಬ ತುಳಿತ ನನ್ನಲ್ಲಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ.ನಿಷ್ಟಿ ರುದ್ರಪ್ಪ ‘ ಮಧು ಬಟ್ಟಲಿನ ಗುಟುಕು’ ಸಹೃದಯರಿಗೆ ಖುಷಿಯನ್ನು ನೀಡುವುದರೊಂದಿಗೆ ಹೊಸ ಆಲೋಚನೆಗೆ ಹಚ್ಚುವಂತಿದೆ ಎಂದರು. ವೇದಿಕೆ ಮೇಲೆ ಡಾ. ಶಿವಲಿಂಗಪ್ಪ ಹಂದಿಹಾಳು, ಡಾ. ಸಿ. ಕೊಟ್ರೇಶ ಇದ್ದರು. ಈ ಸಂದರ್ಭದಲ್ಲಿ ವೀರೇಂದ್ರ ರಾವಿಹಾಳ್, ಗಂಗಾಧರ ಪತ್ತಾರ, ವೆಂಕಟಯ್ಯ ಅಪ್ಪಗೆರೆ, ನಾಗಿರೆಡ್ಡಿ, ಅಜಯ ಬಣಕಾರ,ಅಬ್ದುಲ್ ಹೈ, ಪಿ. ಆರ್. ವೆಂಕಟೇಶ್, ವೀರೇಶ ಸ್ವಾಮಿ, ತಿಪ್ಪೇರುದ್ರ ಸಂಡೂರು, ವಿಬಿ ಮಲ್ಲಪ್ಪ, ಉಪನ್ಯಾಶಕ ರಫೀಕ್, ಮಲ್ಲಿಕಾರ್ಜುನ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!