Advertisement 

ಕಠ್ಮಂಡು ಫೆ.07: ನೇಪಾಳಿ, ಹಿಂದಿ ಹಾಗೂ ಭೋಜ್‌ಪುರಿ ಚಿತ್ರರಂಗಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ನಟ ಸುನಿಲ್ ಥಾಪಾ(68) ಹೃದಯಾಘಾತದಿಂದ ನಿಧನರಾಗಿದ್ದಾರೆ. ನೇಪಾಳಿ ಚಿತ್ರರಂಗದ ‘ಗಬ್ಬರ್’ ಎಂದೇ ಖ್ಯಾತಿ ಪಡೆದಿದ್ದ ಸುನಿಲ್ ಥಾಪಾ, ನೇಪಾಳಿ ಚಿತ್ರರಂಗದಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದರು.
ನೇಪಾಳಿ ಚಿತ್ರಗಳಲ್ಲಷ್ಟೇ ಅಲ್ಲದೆ ಬಾಲಿವುಡ್ ಹಾಗೂ ಭೋಜ್‌ಪುರಿ ಸಿನಿಮಾಗಳಲ್ಲಿಯೂ ತಮ್ಮ ಭಿನ್ನ ಅಭಿನಯದ ಮೂಲಕ ಗಮನ ಸೆಳೆದಿದ್ದರು. 2014ರಲ್ಲಿ ತೆರೆಗೆ ಬಂದ ʼಮೇರಿ ಕೋಮ್ʼ ಚಿತ್ರದಲ್ಲಿ ಬಾಕ್ಸಿಂಗ್ ಟ್ರೈನರ್ ಆಗಿ ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕೆ ಭಾರೀ ಪ್ರಶಂಸೆ ಲಭಿಸಿತ್ತು. ಈ ಪಾತ್ರದ ಅಭಿನಯಕ್ಕೆ ಸುನಿಲ್ ಥಾಪಾ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿಯೂ ಲಭಿಸಿತ್ತು.
Advertisement 





