ಬಾಗಲಕೋಟೆ: America ಟೆಕ್ಕಿ ಯುವತಿ ತನ್ನ ಮನೆಯಲ್ಲಿ ನಡೆಯಬಹುದಾದ ಕಳ್ಳತನವನ್ನು ತಪ್ಪಿಸಿ ಸುದ್ದಿಯಾಗಿದ್ದಾರೆ.
ಮುಧೋಳದ ಸಿದ್ರಾಮೇಶ್ವರ ಕಾಲೋನಿಯಲ್ಲಿ ವಾಸಿಸುವ ನಿವೃತ್ತ ಎಂಜಿನಿಯರ್ ಹನಮಂತಗೌಡ ಅವರ ಪುತ್ರಿ ಶೃತಿ ಅಮೆರಿಕದಲ್ಲಿ ಉದ್ಯೋಗದಲ್ಲಿದ್ದಾರೆ. ವಿದೇಶದಲ್ಲಿದ್ದರೂ ತಕ್ಷಣದ ಸಮಯಪ್ರಜ್ಞೆ ತೋರಿದ ಶೃತಿ, ಮನೆಗೆ ನುಗ್ಗಿದ್ದ ಕಳ್ಳರನ್ನು ಓಡಿಸಲು ಯಶಸ್ವಿಯಾದರು.
ಏನಿದು ಘಟನೆ?
ಕೆಲ ವರ್ಷಗಳ ಹಿಂದೆ ಸ್ವದೇಶಕ್ಕೆ ಬಂದಾಗ ಶೃತಿ ತಮ್ಮ ಮನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಜೊತೆಗೆ ಅದರ ದೃಶ್ಯಗಳನ್ನು ನೇರವಾಗಿ ತಮ್ಮ ಮೊಬೈಲ್‌ಗೆ ಸಿಂಕ್ ಮಾಡಿಕೊಂಡಿದ್ದರು.
ಮಂಗಳವಾರ ತಡರಾತ್ರಿ 1ರಿಂದ 2ರ ನಡುವೆ ಚಡ್ಡಿ ಗ್ಯಾಂಗ್‌ನ ಇಬ್ಬರು ಹನಮಂತಗೌಡ ಸಂಕಪ್ಪನವರ್ ಅವರ ಮನೆಯಲ್ಲಿ ನುಗ್ಗಿದರು. ಮುಧೋಳದಲ್ಲಿ ಮಧ್ಯರಾತ್ರಿ ಇದ್ದರೂ, ಅಮೆರಿಕದಲ್ಲಿ ಮಧ್ಯಾಹ್ನ 3:30 ಆಗಿತ್ತು. ಆ ವೇಳೆಗೆ ಮೊಬೈಲ್ ನೋಡುತ್ತಿದ್ದ ಶೃತಿ, ಮನೆಯಲ್ಲಿ ಕಳ್ಳರು ನುಗ್ಗುತ್ತಿರುವ ದೃಶ್ಯವನ್ನು ನೋಡಿ ತಕ್ಷಣ ಪೋಷಕರಿಗೆ ಕರೆ ಮಾಡಿದರು.
ಮತ್ತಷ್ಟು ಓದಿ: ಅನುಶ್ರೀ–ರೋಷನ್ ಹಳದಿ ಶಾಸ್ತ್ರದ ಚಿತ್ರಗಳು ವೈರಲ್ ಆಗಸ್ಟ್ 28ರಂದು ಮದುವೆ ಆಗಲಿರುವ ನಿರೂಪಕಿ
ಎಚ್ಚೆತ್ತ ಪೋಷಕರು ಬಾಗಿಲು ತೆರೆಯದೇ ಮನೆಯ ಎಲ್ಲಾ ದೀಪಗಳನ್ನು ಆನ್ ಮಾಡಿ ಜೋರಾಗಿ ಕೂಗಿದರು. ದಿಢೀರ್ ಬೆಳಕು ಹೊತ್ತಿರುವುದನ್ನು ಕಂಡ ಕಳ್ಳರು ಬೆಚ್ಚಿಬಿದ್ದು ಸ್ಥಳದಿಂದ ಪರಾರಿಯಾದರು.
ಇದೀಗ ಮುಧೋಳ ನಗರದಲ್ಲಿ ಚಡ್ಡಿ ಗ್ಯಾಂಗ್ ಕಳ್ಳತನಗಳ ಹಾವಳಿ ಹೆಚ್ಚಾಗಿದೆ. ಕಳ್ಳರನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆಕ್ರೋಶವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.
