
ಲೇಖಕರು: ಗಣೇಶ ರಾಮಚಂದ್ರ ಮಾಂಡ್ರೆ
ಸಾಹಿತಿಗಳು, ಅರಿವು ಬೋಧಿ ಪ್ರಕಾಶನ.
ಗ್ರಾಮದ ತುದಿಯಲ್ಲಿ ಇರುವ ಅಶ್ವಿನಿ ಮನೆಗೆ ಮದುವೆ ಎಂಬ ಪದವೇ ಭಾರವಾಗಿತ್ತು. “ಬಂಧನ,” “ತ್ಯಾಗ,” “ಜವಾಬ್ದಾರಿ” — ಇವೇ ಅವಳಿಗೆ ಮದುವೆಯ ಅರ್ಥ.
ಒಂದು ದಿನ ಅವಳ ಅಜ್ಜಿ ಹೇಳಿದಳು, “ಮಗಳೇ, ಮದುವೆಯಲ್ಲಿ ಅಮೃತ ಇದೆ. ಅದನ್ನು ಕುಡಿಯೋದು ಗೊತ್ತಿರಬೇಕು ಅಷ್ಟೇ.” ಅಶ್ವಿನಿಗೆ ನಗು ಬಂತು. “ಅಜ್ಜಿ, ವಿಷದ ಜಗತ್ತಿನಲ್ಲಿ ಅಮೃತ ಎಲ್ಲಿಂದ ಬರಬೇಕು?” ಮದುವೆಯಾದ ಮೇಲೆ ದಿನಗಳು ಸಾಗಿದವು.
ಬೆಳಗಿನ ಚಹಾ ಇಬ್ಬರ ಕೈಯಲ್ಲಿ ಒಟ್ಟಿಗೆ ಬಿಸಿಯಾದಾಗ, ಅಸ್ವಸ್ಥವಾಗಿದ್ದ ದಿನ ಅವಳ ಗಂಡ ಮೌನವಾಗಿ ಅವಳ ತಲೆ ಮೇಲೆ ಕೈ ಇಟ್ಟಾಗ, ಅವಳು ಸೋತಾಗ “ನೀನು ಸಾಕು” ಅನ್ನೋ ಒಂದು ವಾಕ್ಯ ಕೇಳಿಸಿದಾಗ —ಅವಳು ನಿಧಾನವಾಗಿ ಅರ್ಥ ಮಾಡಿಕೊಂಡಳು.
ಅಮೃತ ಎಂದರೆ ಹಬ್ಬದ ದಿನಗಳಲ್ಲಿಲ್ಲ. ಅದು ಸಣ್ಣ ಕ್ಷಣಗಳಲ್ಲಿ ಇರುತ್ತದೆ. ಒಬ್ಬರ ದುರ್ಬಲತೆಯನ್ನು ಇನ್ನೊಬ್ಬರು ಕಾಪಾಡುವಾಗ, ಮೌನಕ್ಕೂ ಅರ್ಥ ಸಿಗುವಾಗ, ಜಗಳದ ನಂತರವೂ ಕೈ ಬಿಡದಾಗ.
ಒಂದು ಸಂಜೆ ಅಶ್ವಿನಿ ಅಜ್ಜಿಯ ಪಕ್ಕ ಕುಳಿತುಕೊಂಡು ಹೇಳಿದಳು, “ಅಜ್ಜಿ, ನೀನು ಸರಿ. ಮದುವೆಯಲ್ಲಿ ಅಮೃತ ಇದೆ. ಆದ್ರೆ ಅದು ಕಪ್‌ನಲ್ಲಿ ಅಲ್ಲ… ಹೃದಯದಲ್ಲಿ.”
ಅಜ್ಜಿ ನಗುತಾಳೆ.ಅಮೃತ ಸಿಕ್ಕವಳಂತೆ.





