ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಅಭಿಮಾನಿಗಳಿಗೆ ಕೇರ್ ಸೆಂಟರ್ ಆರಂಭಿಸಲು RCB ನಿರ್ಧಾರ

0
19
rcb

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ (Bengaluru Stampede) ಘಟನೆ ಅಭಿಮಾನಿಗಳಿಗೆ ತೀವ್ರ ನೋವು ತಂದಿತ್ತು. ಈ ಹಿನ್ನೆಲೆಯಲ್ಲಿ ಆರ್‌ಸಿಬಿ (RCB) ಆಡಳಿತ ಮಂಡಳಿ ಇದೀಗ ಅಭಿಮಾನಿಗಳಿಗಾಗಿ ಕೇರ್ ಸೆಂಟರ್ ಆರಂಭಿಸಲು ನಿರ್ಧರಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಪ್ರಕಟಣೆ ಹೊರಡಿಸಿದ್ದು, “ಚಿನ್ನಸ್ವಾಮಿ ಸ್ಟೇಡಿಯಂ ಎಂದಿಗೂ ಅಭಿಮಾನಿಗಳ ಸಂಭ್ರಮದ ಕೇಂದ್ರವಾಗಿತ್ತು. ಆದರೆ ಜೂನ್ 4ರಂದು ನಡೆದ ದುರ್ಘಟನೆಯಿಂದ ಆ ಸಂತೋಷ ಕಳೆದುಹೋಯಿತು. ಆ ದಿನ ನಮ್ಮ ಹೃದಯ ಚೂರಾಯಿತು. ಕಳೆದ ಮೂರು ತಿಂಗಳ ಕಾಲ ಈ ದುಃಖವನ್ನು ಮೌನವಾಗಿ ಸಹಿಸಿಕೊಂಡಿದ್ದೇವೆ” ಎಂದು ತಿಳಿಸಿದೆ.

ಈ ದುರ್ಘಟನೆಯಿಂದ ನಾವು ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಅಭಿಮಾನಿಗಳೊಂದಿಗೆ ಸದಾ ನಿಲ್ಲಲು ನಾವು ತೀರ್ಮಾನಿಸಿದ್ದೇವೆ. ಅದಕ್ಕಾಗಿ ಅಭಿಮಾನಿಗಳಿಗಾಗಿ ಕೇರ್ ಸೆಂಟರ್ ಆರಂಭಿಸಲು ನಿರ್ಧರಿಸಲಾಗಿದೆ. ಇದರ ಮೂಲಕ ಕರ್ನಾಟಕದ ಹೆಮ್ಮೆಯಾಗಿ ಮುಂದುವರಿಯುತ್ತೇವೆ. ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುತ್ತದೆ ಎಂದು ಆರ್‌ಸಿಬಿ ಅಭಿಮಾನಿಗಳಿಗೆ ಭಾವನಾತ್ಮಕವಾಗಿ ತಿಳಿಸಿದೆ.

ಮತ್ತಷ್ಟು ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ 10 ತಾಲೂಕುಗಳ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ

ಏನಿದು ದುರ್ಘಟನೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು 18 ವರ್ಷಗಳ ಬಳಿಕ ಐಪಿಎಲ್ (IPL) ಚಾಂಪಿಯನ್ ಪಟ್ಟ ಗೆದ್ದಿತ್ತು. ಈ ಯಶಸ್ಸನ್ನು ಆಚರಿಸಲು ಜೂನ್ 4ರಂದು ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಅಭಿಮಾನಿಗಳು ಸಂಭ್ರಮಾಚರಣೆಗೆ ಸೇರಿದ್ದರು. ಆದರೆ ಉಚಿತ ಪ್ರವೇಶ ಘೋಷಣೆಯಿಂದ ನಿರೀಕ್ಷೆಗೂ ಮೀರಿದ ಜನ ಸಮೂಹ ಸೇರಿ ಕಾಲ್ತುಳಿತ ಸಂಭವಿಸಿತು. ಈ ಅವಘಡದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡರು.

Advertisement

LEAVE A REPLY

Please enter your comment!
Please enter your name here