78 ವರ್ಷಗಳ ನಂತರ ಗ್ರಾಮಕ್ಕೆ ಬಸ್ ಸಂಪರ್ಕ; ತಮ್ಮನ್ ಹಳ್ಳಿಗೆ ಬಂತು ಎಚ್.ಆರ್.ಟಿ.ಸಿ ಬಸ್!

0
24
Advertisement

ಮಂಡಿ, ಜ.06: ದೇಶಕ್ಕೆ ಸ್ವಾತಂತ್ರ್ಯ ದೊರೆತು 78 ವರ್ಷಗಳಾದ ಬಳಿಕ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಕರ್ಸೋಗ್ ಉಪವಿಭಾಗದಲ್ಲಿರುವ ತುಮ್ಮನ್ ಗ್ರಾಮಕ್ಕೆ ಮೊದಲ ಬಾರಿಗೆ ಸರ್ಕಾರಿ ಬಸ್ ಸಂಪರ್ಕ ದೊರೆತಿದೆ. ಡಿಸೆಂಬರ್ 31ರಂದು ಹಿಮಾಚಲ ರಸ್ತೆ ಸಾರಿಗೆ ನಿಗಮದ ಬಸ್ ಗ್ರಾಮಕ್ಕೆ ಆಗಮಿಸಿದ ಕ್ಷಣವನ್ನು ಸ್ಥಳೀಯರು ಹಬ್ಬದಂತೆ ಆಚರಿಸಿದರು.

ಇದುವರೆಗೆ ರಸ್ತೆ ಸಂಪರ್ಕವಿದ್ದರೂ ಬಸ್ ಸೌಲಭ್ಯವಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದ ತುಮ್ಮನ್ ಗ್ರಾಮಸ್ಥರಿಗೆ ಈ ದಿನ ಐತಿಹಾಸಿಕವಾಗಿದ್ದು, ನೂರಾರು ಜನರು ಈ ಕ್ಷಣಕ್ಕೆ ಸಾಕ್ಷಿಯಾದರು. ಬಸ್ ಆಗಮಿಸಿದ ತಕ್ಷಣ ಗ್ರಾಮಸ್ಥರು ಹೂವಿನ ಹಾರಗಳಿಂದ ಅಲಂಕರಿಸಿದ ಬಸ್‌ಗೆ ಭವ್ಯ ಸ್ವಾಗತ ನೀಡಿದರು. ರಿಬ್ಬನ್ ಕತ್ತರಿಸಿ ಬಸ್ ಸೇವೆಯನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ಸಿಹಿತಿಂಡಿಗಳನ್ನು ವಿತರಿಸಿ ಸಂಭ್ರಮ ಹಂಚಿಕೊಳ್ಳಲಾಯಿತು.

ಆಸ್ಪತ್ರೆ, ಶಿಕ್ಷಣ ಹಾಗೂ ಸರ್ಕಾರಿ ಕಚೇರಿ ಕೆಲಸಗಳಿಗಾಗಿ ಈವರೆಗೆ ದೂರದ ನಗರ ಪ್ರದೇಶಗಳಿಗೆ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾಗಿದ್ದ ಗ್ರಾಮಸ್ಥರಿಗೆ ಇದೀಗ ಸರ್ಕಾರಿ ಬಸ್ ಸೇವೆ ಮಹತ್ತರ ನೆರವಾಗಲಿದೆ. ನಗರ ಪ್ರದೇಶಗಳೊಂದಿಗೆ ತುಮ್ಮನ್ ಗ್ರಾಮವನ್ನು ಸಂಪರ್ಕಿಸುವ ಈ ಬಸ್ ಸೇವೆ, ಅಭಿವೃದ್ಧಿಯತ್ತ ಗ್ರಾಮದ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here