ಶ್ರೇಷ್ಠ ಗುರು

0
5
Advertisement

ಲೇಖಕರು: ಗಣೇಶ ರಾಮಚಂದ್ರ ಮಾಂಡ್ರೆ

ಸಾಹಿತಿಗಳು, ಅರಿವು ಬೋಧಿ ಪ್ರಕಾಶನ

ಒಂದು ಚಿಕ್ಕ ಹಳ್ಳಿಯಲ್ಲಿ ರಾಮು ಎಂಬ ಬಾಲಕನಿದ್ದ. ಅವನು ತುಂಬಾ ಕುತೂಹಲದ ಹುಡುಗ. ಒಂದು ದಿನ ಹಳ್ಳಿಗೆ ಒಬ್ಬ ಕೈ ನೋಡಿ ಭವಿಷ್ಯ ಹೇಳುವ ಜ್ಯೋತಿಷಿ ಬಂದನು. ಜನರು ಸಾಲಾಗಿ ನಿಂತು ತಮ್ಮ ಕೈ ತೋರಿಸುತ್ತಿದ್ದರು. ರಾಮುವಿಗೂ ಕುತೂಹಲವಾಯಿತು. ಅವನು ತನ್ನ ಕೈ ಜ್ಯೋತಿಷಿಗೆ ತೋರಿಸಿದ.

ಜ್ಯೋತಿಷಿ ಹೇಳಿದನು,“ನೀನು ದೊಡ್ಡವನಾಗಿ ಶ್ರೀಮಂತನಾಗುವೆ!” ರಾಮು ತುಂಬಾ ಸಂತೋಷಪಟ್ಟ. “ಅಯ್ಯೋ! ಆಗ ನಾನು ಈಗ ಏನೂ ಮಾಡದೆ ಇದ್ದರೂ ಸರಿಯೇನೋ!” ಎಂದುಕೊಂಡನು.

ಆ ದಿನದಿಂದ ಓದನ್ನು ಕಡಿಮೆ ಮಾಡತೊಡಗಿದ. ಇದನ್ನು ಗಮನಿಸಿದ ಅವನ ಗುರುಜಿ ಅವನನ್ನು ಕರೆಯಿಸಿದರು.“ರಾಮು, ಏಕೆ ಓದುವುದಿಲ್ಲ?” ಎಂದು ಕೇಳಿದರು. ರಾಮು ಹೇಳಿದನು, “ಗುರುಜೀ, ಜ್ಯೋತಿಷಿ ಹೇಳಿದ್ದಾನೆ ನಾನು ದೊಡ್ಡವನಾಗಿ ಶ್ರೀಮಂತನಾಗುತ್ತೇನೆ ಎಂದು!”

ಗುರುಜಿ ಸಿರಿವೆಯುತ್ತ ಹೇಳಿದರು,“ರಾಮು, ಕೈ ಹಿಡಿದು ಭವಿಷ್ಯ ಹೇಳುವವರು ಸಾವಿರಾರು ಇರಬಹುದು. ಆದರೆ ಕೈ ಹಿಡಿದು ಜೀವನ ರೂಪಿಸುವವರು ಶ್ರೇಷ್ಠ ಗುರು ಮಾತ್ರ. ನಿನ್ನ ಭವಿಷ್ಯ ನಿನ್ನ ಕೈಯಲ್ಲಿದೆ. ಆದರೆ ಅದನ್ನು ಸುಂದರವಾಗಿಸಲು ಪರಿಶ್ರಮ ಬೇಕು.” ಅವರು ರಾಮುವಿನ ಕೈ ಹಿಡಿದು, ಓದಲು ಸಹಾಯ ಮಾಡಿದರು. ತಪ್ಪುಗಳನ್ನು ಸರಿಪಡಿಸಿದರು. ಪ್ರತಿದಿನ ಪ್ರೋತ್ಸಾಹಿಸಿದರು.

ಕಾಲ ಕಳೆದಿತು. ರಾಮು ಚೆನ್ನಾಗಿ ಓದಿ, ಒಳ್ಳೆಯ ಕೆಲಸ ಪಡೆದು, ತನ್ನ ಕುಟುಂಬಕ್ಕೂ ಹಳ್ಳಿಗೂ ಹೆಮ್ಮೆ ತಂದನು. ಅವನು ಅರಿತುಕೊಂಡನು — ಭವಿಷ್ಯ ಹೇಳುವುದಕ್ಕಿಂತ, ಜೀವನ ರೂಪಿಸುವುದು ಮಹತ್ತರ.

Advertisement

LEAVE A REPLY

Please enter your comment!
Please enter your name here