Welcome to BP News Karnataka   Click to listen highlighted text! Welcome to BP News Karnataka
Friday, February 21, 2025
HomeDistrictsಮಾಜಿ ಶಾಸಕ ಶ್ರೀರಾಮುಲು ಸಾಮಾಜಿಕ ಜಾಲತಾಣ ಖಾತೆಗಳು ಹ್ಯಾಕ್​: ಯಾರಿಗೂ ಹಣ ನೀಡದಂತೆ ಮನವಿ

ಮಾಜಿ ಶಾಸಕ ಶ್ರೀರಾಮುಲು ಸಾಮಾಜಿಕ ಜಾಲತಾಣ ಖಾತೆಗಳು ಹ್ಯಾಕ್​: ಯಾರಿಗೂ ಹಣ ನೀಡದಂತೆ ಮನವಿ

ಹ್ಯಾಕ್‌ರ್​ಗಳು ಮಾಜಿ ಶಾಸಕ ಶ್ರೀರಾಮುಲು ಹೆಸರಿನ ಸಾಮಾಜಿಕ‌‌ ಜಾಲತಾಣಗಳನ್ನ ಖದೀಮರು ಬಳಸಿಕೊಂಡು ವಂಚಿಸಲು ಮುಂದಾಗಿದ್ದರು. ಸಾಮಾಜಿಕ‌‌ ಜಾಲತಾಣಗಳು ಹ್ಯಾಕ್​ ಆದ ವಿಚಾರ ತಿಳಿಯುತ್ತಿದ್ದಂತೆ ಶ್ರೀರಾಮುಲು ಯಾರಿಗೂ ಹಣ ನೀಡದಂತೆ ತಿಳಿಸಿದ್ದಾರೆ.

ಬಳ್ಳಾರಿ, ಅಕ್ಟೋಬರ್​​ 07: ಮಾಜಿ ಶಾಸಕ ಶ್ರೀರಾಮುಲು (Sriramulu) ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ಇನ್ಸ್​ಸ್ಟಾಗ್ರಾಂ ಖಾತೆಗಳನ್ನು ಖದೀಮರು ಹ್ಯಾಕ್​ ಮಾಡಿದ್ದಾರೆ. ನಕಲಿ ಪೋಸ್ಟ್, ಶೇರ್ ಮಾರ್ಕೆಟ್ ಲಿಂಕ್ ಕಳುಹಿಸಿ ಹ್ಯಾಕ್‌ರ್​ಗಳಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ತಕ್ಷಣ ಎಚ್ಚೆತ್ತುಕೊಂಡ ಶ್ರೀರಾಮುಲು, ಯಾರಿಗೂ ಹಣ ನೀಡಬೇಡಿ ಎಂದು ಮನವಿ ಮಾಡಿದ್ದಾರೆ.

ಹ್ಯಾಕ್‌ರ್​ಗಳು ಮಾಜಿ ಶಾಸಕ ಶ್ರೀರಾಮುಲು ಹೆಸರಿನ ಸಾಮಾಜಿಕ‌‌ ಜಾಲತಾಣಗಳನ್ನ ಖದೀಮರು ಬಳಸಿಕೊಂಡು ವಂಚಿಸಲು ಮುಂದಾಗಿದ್ದರು. ಸಾಮಾಜಿಕ‌‌ ಜಾಲತಾಣಗಳು ಹ್ಯಾಕ್​ ಆದ ವಿಚಾರ ತಿಳಿಯುತ್ತಿದ್ದಂತೆ ಶ್ರೀರಾಮುಲು ಯಾರಿಗೂ ಹಣ ನೀಡದಂತೆ ತಿಳಿಸಿದ್ದಾರೆ.

ಮಾಜಿ ಶಾಸಕ ಶ್ರೀರಾಮುಲು ಟ್ವೀಟ್​ 

ಈ ಬಗ್ಗೆ ಟ್ವೀಟ್ ಮಾಡಿರುವ ಶ್ರೀರಾಮುಲು, ತುರ್ತು ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ತಾಂತ್ರಿಕ ದೋಷದಿಂದ ನನ್ನ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ಕೆಳಕಂಡ ನಕಲಿ ಫೇಸ್‌ಬುಕ್‌ ಹಾಗೂ ಇನ್ಸ್​ಸ್ಟಾಗ್ರಾಂ ಖಾತೆಗಳಲ್ಲಿ ಸಂದೇಶ ಮಾಡುವ ನಕಲಿ ಆ್ಯಪ್​ ಲಿಂಕ್​ ಹಾಕಲಾಗಿದ್ದು,ಇದಕ್ಕೆ ನಾನು ಹೊಣೆಯಲ್ಲ ಎಂದು ತಮ್ಮೆಲ್ಲರ ಗಮನಕ್ಕೆ ತರುತ್ತಿದ್ದೇನೆ ಎಂದು ಹೇಳಿದ್ದಾರೆ.

ಹಿರಿಯ ನಟ, ಪರಿಸರವಾದಿ ಸುರೇಶ ಹೆಬ್ಳೀಕರ್ ಇ-ಮೇಲ್ ಹ್ಯಾಕ್

ಇನ್ನು ಇತ್ತೀಚೆಗೆ ದುಷ್ಕರ್ಮಿಗಳಿಂದ ಹಿರಿಯ ನಟ, ಪರಿಸರವಾದಿ ಸುರೇಶ ಹೆಬ್ಳೀಕರ್ ಇ-ಮೇಲ್ ಹ್ಯಾಕ್ ಮಾಡಲಾಗಿತ್ತು. ಮೇಲ್ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಲವರಿಗೆ ಮೇಲ್ ರವಾನೆ ಕೂಡ ಆಗಿತ್ತು. ಹೆಬ್ಳೀಕರ್ ಇಕೋ ವಾಚ್ ಎಂಬ ಸಂಸ್ಥೆ ನಡೆಸುತ್ತಿದ್ದಾರೆ. ಸದ್ಯ ಧಾರವಾಡದಲ್ಲಿರುವ ಹೆಬ್ಳೀಕರ್ ಅವರ Rediff mail ಹ್ಯಾಕ್ ಆಗಿತ್ತು.

ಇದನ್ನೂ ಓದಿ: ಒಂದು ರೂಪಾಯಿ ದಾನ ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಮೊಬೈಲ್ ಹ್ಯಾಕ್ ಮಾಡ್ತಾರೆ ಖದೀಮರು

ವಿದೇಶಗಳಲ್ಲಿರುವ ಅನೇಕರಿಗೂ ಮೇಲ್ ರವಾನೆಯಾಗಿದ್ದು, ಸುಮಾರು ಐದು ಲಕ್ಷದವರೆಗೂ ಬೇಡಿಕೆ ಇಡಲಾಗಿತ್ತು. ಮಣಿಪುರ ಗಲಭೆ ಮುಂದಿಟ್ಟುಕೊಂಡು ಡೊನೇಷನ್ ಕೇಳಿದ್ದ ಹ್ಯಾಕರ್ಸ್, ಮಣಿಪುರದಲ್ಲಿ ನಾನು ಪರಿಹಾರ ಕಾರ್ಯ ಮಾಡಬೇಕಿದೆ. ನನಗೆ ಹಣ ಹಾಕಿ ಅಂತಾ ಕಥೆ ಕಟ್ಟಿದ್ದರು, ಹ್ಯಾಕ್ ಆದ ಬಗ್ಗೆ ಹೆಬ್ಳೀಕರ್ ಸ್ಪಷ್ಟನೆ ನೀಡಿದ್ದು, ಯಾರೂ ಹಣ ಹಾಕಬೇಡಿ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

Latest news
Click to listen highlighted text!