ಜಾನಪದ ಗಾಯನದಿಂದ ಗ್ಯಾರಂಟಿ ಯೋಜನೆಗಳ ಕುರಿತು ಅರಿವು

0
93
Advertisement

ಬಳ್ಳಾರಿ,ಡಿ.18:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಅಕ್ಷಯ ಕಲಾ ಟ್ರಸ್ಟ್, ಹೊಸ ರ‍್ರಗುಡಿ ಇವರ ಸಂಯುಕ್ತಾಶ್ರಯದಲ್ಲಿ ಕಂಪ್ಲಿ ತಾಲ್ಲೂಕಿನ ಆಯ್ದ 20 ಹಳ್ಳಿಗಳಲ್ಲಿ ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಕುರಿತು ಜಾನಪದ ಗಾಯನದಿಂದ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.
ಮಂಗಳವಾರ, ಕಂಪ್ಲಿ ತಾಲ್ಲೂಕಿನ ದೇವಲಾಪುರ ಗ್ರಾಮದಿಂದ ಪ್ರಾರಂಭಿಸಲಾಯಿತು.

ಸರ್ಕಾರದ ಪಂಚ ಗ್ಯಾರಂಟಿಗಳಾದ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ, ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳ ಕುರಿತು ಜಾನಪದ ಗಾಯನ ಹಾಗೂ ಸಂಭಾಷಣೆ ಮೂಲಕ ಗ್ರಾಮದ ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

ಈ ಸಂದರ್ಭದಲ್ಲಿ ದೇವಲಾಪುರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಈರಮ್ಮ ಪೂಜಾರಿ, ಉಪಾಧ್ಯಕ್ಷ ಎನ್.ನಾಗರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಶಿಕಾಂತ್.ಕೆ.ಎಚ್., ಕಾರ್ಯದರ್ಶಿ ಎಚ್.ಹುಲುಗಪ್ಪ ಬಡಿಗೇರ್ ಹಾಗೂ ಕಲಾವಿದರಾದ ಅಕ್ಷಯ ಕಲಾ ಟ್ರಸ್ಟ್ನ ಅಧ್ಯಕ್ಷ ಹೆಚ್.ಜಿ.ಸುಂಕಪ್ಪ, ಹುಲುಗಪ್ಪ.ಎನ್., ಬಂಡಿಹಳ್ಳಿ ಜಯಸುದ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.

Advertisement

LEAVE A REPLY

Please enter your comment!
Please enter your name here