

ಬಿಪಿನ್ಯೂಸ್ ಕರ್ನಾಟಕ
ಆಗಸ್ಟ್ 7, 2025 :
ಶ್ರವಣ ಎಜುಕೇಶನ್ ಟ್ರಸ್ಟ್‌ನ ಘಟಕವಾದ ಶ್ರವಣ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್, ಬಳ್ಳಾರಿ, ರೆಹಾಬಿಲಿಟೇಶನ್ ಕೌನ್ಸಿಲ್ ಆಫ್ ಇಂಡಿಯಾ (RCI) ಯಿಂದ ಮಾನ್ಯತೆ ಪಡೆದ “Recent Advances in Auditory Neuropathy Spectrum Disorders and Speech Perception” ವಿಷಯದ ಮೇಲೆ ಸಿಆರ್‌ಇ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು.

ಈ ಕಾರ್ಯಕ್ರಮದಲ್ಲಿ
ಡಾ. ಮಂಜುನಾಥ ಎನ್ – ಪ್ರಿನ್ಸಿಪಲ್ ಮತ್ತು ಪ್ರಾಧ್ಯಾಪಕರು, ಇಎನ್‌ಟಿ, ಬಳ್ಳಾರಿ ಮೆಡಿಕಲ್ ಕಾಲೇಜು ಹಾಗೂ ರಿಸರ್ಚ್ ಸೆಂಟರ್, ಬಳ್ಳಾರಿ,
ಡಾ. ಕೃಷ್ಣ ಯಾರಗಂಟ್ಲಾ – ಪ್ರಾಧ್ಯಾಪಕರು, ಮೆಡಿಕಲ್ ರಿಹ್ಯಾಬಿಲಿಟೇಶನ್ ಸೈನ್ಸಸ್, ಕಿಂಗ್ ಖಾಲಿದ್ ಯೂನಿವರ್ಸಿಟಿ, ಸೌದಿ ಅರೇಬಿಯಾ,
ಡಾ. ವಿಜಯ ಕುಮಾರ್ ಎನ್ – ಪ್ರಾಧ್ಯಾಪಕರು, ಮೆಡಿಕಲ್ ರಿಹ್ಯಾಬಿಲಿಟೇಶನ್ ಸೈನ್ಸಸ್, ಕಿಂಗ್ ಖಾಲಿದ್ ಯೂನಿವರ್ಸಿಟಿ, ಸೌದಿ ಅರೇಬಿಯಾ,
ಡಾ. ಹೇಮಂತ ಎನ್ – ಪ್ರಾಧ್ಯಾಪಕರು ಮತ್ತು ವಿಭಾಗಾಧ್ಯಕ್ಷರು, ಜೆಎಸ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹೆರಿಂಗ್, ಮೈಸೂರು,
ಡಾ. ಜಿಜೋ ಪೊಟ್ಟಕ್ಕಲ್ ಮಠಾಯಿ – ಪ್ರಿನ್ಸಿಪಲ್ ಮತ್ತು ಪ್ರಾಧ್ಯಾಪಕರು, ಜೆಎಸ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹೆರಿಂಗ್, ಧಾರವಾಡ,
ಶ್ರೀಮತಿ ಬದಾರಿಯಾ ಎಂ – ಸಹ ಪ್ರಾಧ್ಯಾಪಕಿ, ಎಡಬ್ಲ್ಯುಎಚ್ ಸ್ಪೆಷಲ್ ಕಾಲೇಜು, ಕೊಳ್ಲಿ ಸೇರಿದಂತೆ ಅನೇಕ ತಜ್ಞರಾದ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.

ಈ ಕಾರ್ಯಕ್ರಮವು ಆಧುನಿಕ ಶ್ರವಣ ತಂತ್ರಜ್ಞಾನದ ಬೆಳವಣಿಗೆ, ಶ್ರವಣ ತೊಂದರೆಗಳ ವಿಶ್ಲೇಷಣೆ ಮತ್ತು ಮಾತಿನ ಗ್ರಹಿಕೆ ಕುರಿತ ನವೀನ ಸಂಶೋಧನೆಗಳನ್ನು ಹಂಚಿಕೊಳ್ಳುವ ಅದ್ದೂರಿ ವೇದಿಕೆಯಾಗಿತ್ತು.
ಈ ಸಂಧರ್ಬದಲ್ಲಿ ಸಂಸ್ಥೆಯ ಎಲ್ಲಾ ವ್ಯವಸ್ಥಾಪಕ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
