ಸೇವಾಗ್ರಹ ಮಹತ್ವದ ಹೆಜ್ಜೆ: ರೈತರ ಭೂಮಿ–ಬದುಕು ಅಭಿವೃದ್ಧಿಗೆ ಒತ್ತು

0
6
Advertisement

ಬಾಗಲಕೋಟೆ, ಏ. 03: ಜಿಲ್ಲೆಯ ಸಮೀರವಾಡಿಯ ಗೋದವಾರಿ ಬಯೋರಿಫೈನರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಆರ್. ಬಕ್ಷಿ ಅವರನ್ನು ವಂದೇ ಭಾರತಂ ಫೌಂಡೇಶನ್ ಸಂಸ್ಥಾಪಕ ಬಿಜ್ಜವರ ಎಚ್. ಲೋಕೇಶ್ ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಸುಮಾರು 25 ಸಾವಿರ ರೈತರು, ಅವರ ಕುಟುಂಬಗಳು ಹಾಗೂ ಅವರ ಭೂಮಿ–ಬದುಕಿನ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಕುರಿತು ಚರ್ಚಿಸಲಾಯಿತು.

‘ಸೇವಾಗ್ರಹ: ಆರ್ಟ್ ಆಫ್ ಸರ್ವಿಂಗ್’ ಯೋಜನೆಯಡಿ ರೈತರ ಜೀವನಮಟ್ಟ ಸುಧಾರಣೆ, ಕೃಷಿಯಲ್ಲಿ ನವೀನ ತಂತ್ರಜ್ಞಾನಗಳ ಬಳಕೆ, ಜೀವನೋಪಾಯ ವೃದ್ಧಿ ಹಾಗೂ ಸಮಗ್ರ ಅಭಿವೃದ್ಧಿ ಸಾಧನೆ ಕುರಿತಂತೆ ಆಳವಾದ ಮಾತುಕತೆ ನಡೆಯಿತು.

ಈ ಉಪಕ್ರಮದ ಮೂಲಕ ರೈತರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಯನ್ನು ಬಲಪಡಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ಬಿಜ್ಜವರ ಎಚ್. ಲೋಕೇಶ್ ತಿಳಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here