ದಾಖಲೆ ಬರೆದ ದಮ್ಮೂರು ಬೃಂದಾ ಪಿಯು ಕಾಲೇಜು; ತಾಲೂಕಿಗೆ ನಂ.1 ಸ್ಥಾನ

0
2
Advertisement

ದಮ್ಮೂರು, ಏ.10: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ದಮ್ಮೂರಿನ ಬೃಂದಾ ಪಿಯು ಕಾಲೇಜು ಶೇಕಡಾ 100 ಫಲಿತಾಂಶದೊಂದಿಗೆ ಗಮನ ಸೆಳೆದಿದ್ದು, ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದು ದಾಖಲೆ ನಿರ್ಮಿಸಿದೆ.

ಕಾಲೇಜಿನ ವಿದ್ಯಾರ್ಥಿಗಳು ಎಲ್ಲಾ ಐಚ್ಛಿಕ ವಿಷಯಗಳಲ್ಲೂ ಉತ್ತಮ ಅಂಕಗಳನ್ನು ಗಳಿಸಿದ್ದು, ಹಲವರು ನೂರಕ್ಕೆ ನೂರು ಅಂಕಗಳನ್ನು ಪಡೆದು ಗ್ರಾಮೀಣ ಭಾಗದ ಶಿಕ್ಷಣದ ಮಟ್ಟವನ್ನು ಮತ್ತಷ್ಟು ಎತ್ತಿಹಿಡಿದಿದ್ದಾರೆ.

ಸೈನ್ಸ್ ವಿಭಾಗದಲ್ಲಿ ನಯನಶ್ರೀ ಬಿ ಮಣ್ಣೂರ್ 571 ಅಂಕಗಳು (95.16%) ಗಳಿಸಿ ಹಾಗೂ ಕಾಮರ್ಸ್ ವಿಭಾಗದಲ್ಲಿ ಕೌಸರ್ ಪಿ 570 ಅಂಕಗಳು (95%) ಪಡೆದು ಕಾಲೇಜಿನ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇಬ್ಬರೂ ತಮ್ಮ ತಮ್ಮ ವಿಭಾಗಗಳಲ್ಲಿ ಕುರುಗೋಡು ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಇನ್ನು ಸೈನ್ಸ್ ವಿಭಾಗದಲ್ಲಿ ಪಿ. ಪ್ರತೂಷ (94.67%), ಸಿಂಚನ (94%), ಎ. ರಾಜೇಶ್ವರಿ (93.67%), ಇ. ಹಾರಿಕ (91.67%), ರಂಜಿತ ಎಂ.ಎಂ (90.17%), ವೈಷ್ಣವಿ ಬೋಂದ್ರೆ (89.17%), ಚೈತನ್ಯ ಡಿ.ಜಿ (88.67%), ಎಂ. ಸಿಂಧು (88%), ವಂದನಾ ಡಿ (86.83%), ಅವನಿ ಗಂಗಾವತಿ (85.17%), ಬಿ. ದೀಪಿಕಾ (85.17%) ಮತ್ತು ಟಿ. ಜೀವಿತಾ (85%) ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಉಳಿದ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿ ಜಿಲ್ಲೆಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

ಕಾಮರ್ಸ್ ವಿಭಾಗದಲ್ಲೂ ಕೆ. ಗಾಯತ್ರಿ (94.17%), ವಡ್ಡರ ಪ್ರಿಯಾಂಕ (93.33%), ಎನ್. ಸ್ಪಂದನಾ ರೆಡ್ಡಿ (93.17%), ಇ. ಮಾಂಕಳಮ್ಮ (91.67%), ಜಿ. ಮಹಾಲಕ್ಷ್ಮಿ (89.83%), ಎಚ್. ಅಂಕಿತ (86.17%) ಮತ್ತು ಸ್ಪಂದನ (86%) ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು, ಉಳಿದವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಈ ಸಾಧನೆಗೆ ಆಡಳಿತ ಮಂಡಳಿಯ ಬೆಂಬಲ, ಉಪನ್ಯಾಸಕರ ಪರಿಶ್ರಮ ಮತ್ತು ಸಿಬ್ಬಂದಿಯ ಸಹಕಾರವೇ ಕಾರಣ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಜಯವರ್ಧನ ಎಂ.ಎಲ್ ತಿಳಿಸಿದ್ದಾರೆ.

ಎಸ್.ಬಿ. ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ದಮ್ಮೂರು ಶೇಖರ್ ಹಾಗೂ ಸಂಸ್ಥಾಪಕ-ಸಿಇಒ ಡಾ. ಭವ್ಯ ಶೇಖರ್ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ, ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ವಿದ್ಯಾರ್ಥಿಗಳ ಪೋಷಕರಿಗೂ ಧನ್ಯವಾದಗಳನ್ನು ತಿಳಿಸಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸದಾ ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

Advertisement

LEAVE A REPLY

Please enter your comment!
Please enter your name here