
ಬೆಂಗಳೂರು, ಏ.04: ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಉದ್ದೇಶದಿಂದ ಬೇಸಿಗೆ ರಜಾದಿನಗಳಲ್ಲಿ, ಬೆಂಗಳೂರಿನ ಕಟ್ಟುಕಥೆ ಕಥಾಸ್ಪರ್ಧೆ ವೇದಿಕೆ ವತಿಯಿಂದ ‘ಕಟ್ಟುಕಥೆ’ ಮಕ್ಕಳ ಕಥಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಮಕ್ಕಳ ಅಕ್ಷರ ಪ್ರೀತಿಗೆ ವೇದಿಕೆ ಕಲ್ಪಿಸುವ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಮುಕ್ತವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಶಾಲಾ ದಿನಗಳ ನೆನಪುಗಳು, ಸ್ನೇಹಿತರ ಜೊತೆಗಿನ ಆಟ-ಪಾಠ, ಕುಟುಂಬದ ಸಿಹಿ ಕ್ಷಣಗಳು, ಊರಿನ ಸಂಸ್ಕೃತಿ, ರಜಾದಿನಗಳ ಅನುಭವಗಳು ಸೇರಿದಂತೆ ತಮ್ಮ ಜೀವನದ ವಿಭಿನ್ನ ಅನುಭವಗಳನ್ನು ಕಥೆಯ ರೂಪದಲ್ಲಿ ಕಟ್ಟಿಕೊಟ್ಟು ಕಳುಹಿಸಲು ಆಯೋಜಕರು ಕರೆ ನೀಡಿದ್ದಾರೆ.
“ಕಥೆಯೊಂದನ್ನು ಕಟ್ಟೋಣ, ನೆನಪುಗಳ ಹೆಕ್ಕೋಣ, ಅಕ್ಷರಗಳ ಪುಂಜ ಸೃಷ್ಟಿಸೋಣ!” ಎಂಬ ಧ್ಯೇಯವಾಕ್ಯದೊಂದಿಗೆ ಈ ಸ್ಪರ್ಧೆ ನಡೆಯಲಿದೆ. ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳ ವಿಭಜನೆ ಇಲ್ಲದೆ ಆಯ್ಕೆಯಾದ ಮೂರು ಉತ್ತಮ ಕಥೆಗಳಿಗೆ ಸಮಾನ ಗೌರವ ನೀಡಲಾಗುವುದು ಎಂದು ತಿಳಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತರು ತಮ್ಮ ಸ್ವರಚಿತ ಕಥೆಯನ್ನು ಕೈಬರಹದಲ್ಲಿ ಬರೆದು, ಅದರ ಸ್ಪಷ್ಟವಾದ ಚಿತ್ರವನ್ನು ತೆಗೆದು ವಾಟ್ಸಾಪ್ ಸಂಖ್ಯೆ 6360322392ಕ್ಕೆ ಕಳುಹಿಸಬೇಕು.
ನಿಬಂಧನೆಗಳು:
- ಕಥೆ 300 ಪದಗಳ ಮಿತಿಯಲ್ಲಿರಬೇಕು.
- ಕಥೆ ಸ್ವರಚಿತವಾಗಿದ್ದು ಕೈಬರಹದಲ್ಲಿರಬೇಕು.
- ಕೈಬರಹದಲ್ಲಿ ಬರೆದ ಕಥೆಯನ್ನು ಸ್ಪಷ್ಟವಾಗಿ ಫೋಟೋ ತೆಗೆದು ವಾಟ್ಸಾಪ್ ಮೂಲಕ ಕಳುಹಿಸಬೇಕು.
- ಯಾವುದೇ ವಿಷಯವನ್ನು ಆಯ್ಕೆ ಮಾಡಬಹುದು.
- ಕಥೆ ಎಲ್ಲಿಯೂ ಪ್ರಕಟವಾಗಿರಬಾರದು.
- ಅಕ್ಷರ ದೋಷಗಳಿರುವ ಬರಹಗಳನ್ನು ಪರಿಗಣಿಸಲಾಗುವುದಿಲ್ಲ.
- ಸ್ಪರ್ಧಾರ್ಥಿಗಳ ವಯಸ್ಸು 18 ವರ್ಷ ಮೀರಿರಬಾರದು.
- ಕಥೆಯ ಕೊನೆಯಲ್ಲಿ ಹಸ್ತಾಕ್ಷರ, ಪೂರ್ಣ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
- ಕಥೆ ಕಳುಹಿಸುವ ಕೊನೆಯ ದಿನಾಂಕ: 20-05-2026.
- ನಿಬಂಧನೆಗಳನ್ನು ಪಾಲಿಸದ ಕಥೆಗಳನ್ನು ಪರಿಗಣಿಸಲಾಗುವುದಿಲ್ಲ.
- ಕಥೆಯನ್ನು ಸ್ಪರ್ಧಾರ್ಥಿಯ ಅಥವಾ ಪೋಷಕರ ಮೊಬೈಲ್‌ನಿಂದ ಕಳುಹಿಸಬಹುದು.
ಇನ್ನೇಕೆ ತಡ? ಇಂದೇ ಪೆನ್ನು-ಕಾಗದ ಹಿಡಿದು ನಿಮ್ಮ ಅನುಭವವನ್ನು ಕಥೆಯಾಗಿ ರೂಪಿಸಿ ಕಳುಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.





