ಜಯಪ್ರಕಾಶ್ ಶೆಟ್ಟಿ ಮಾಧ್ಯಮ ಲೋಕಕ್ಕೆ ರಿ ಎಂಟ್ರಿ; ಸಂಪೂರ್ಣ ನ್ಯೂಸ್‌ಗೆ ಪ್ರಧಾನ ಸಂಪಾದಕರಾಗಿ ನೇಮಕ

0
2
Advertisement

ಬೆಂಗಳೂರು, ಫೆ.22: ಸಿನಿಮಾದಲ್ಲಿ ತೊಡಗಿಸಿಕೊಂಡಿರುವುದರಿಂದ ಅಲ್ಪ ವಿರಾಮ ತೆಗೆದುಕೊಂಡ‌ ಖ್ಯಾತ ಪತ್ರಕರ್ತ ಹಾಗೂ ಸುದ್ದಿವಾಹಿನಿಯ ನಿರೂಪಕರಾದ ಜಯಪ್ರಕಾಶ್ ಶೆಟ್ಟಿ ಮತ್ತೆ ಮಾಧ್ಯಮ ಕ್ಷೇತ್ರಕ್ಕೆ ಮರಳಿದ್ದಾರೆ. ಸಮಾಜದ ಬದಲಾವಣೆಗೆ ಹೊಸ ದಿಕ್ಕು ನೀಡುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಪೂರ್ಣ ನ್ಯೂಸ್ ಸಂಸ್ಥೆಗೆ ಜಯಪ್ರಕಾಶ್ ಶೆಟ್ಟಿ ಅವರು ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿಲಿದ್ದಾರೆ.

ಮಾಧ್ಯಮ ಕ್ಷೇತ್ರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಜಯಪ್ರಕಾಶ್ ಶೆಟ್ಟಿ ಅವರು ನಿಷ್ಪಕ್ಷಪಾತ ಪತ್ರಿಕೋದ್ಯಮ, ಸತ್ಯನಿಷ್ಠ ವರದಿ ಹಾಗೂ ಜನಪರ ಧ್ವನಿಗೆ ಹೆಸರುವಾಸಿಯಾಗಿದ್ದಾರೆ. ಸಮಾಜದ ಎಲ್ಲ ವರ್ಗಗಳ ಸಮಸ್ಯೆಗಳಿಗೆ ಸ್ಪಂದಿಸುವ ಸುದ್ದಿಗಳನ್ನು ಜನರ ಮುಂದಿಡುವಲ್ಲಿ ಅವರು ಸದಾ ಮುಂಚೂಣಿಯಲ್ಲಿದ್ದಾರೆ.

ಜಯಪ್ರಕಾಶ್ ಶೆಟ್ಟಿ ಅವರ ನೇಮಕದಿಂದ ಸಂಪೂರ್ಣ ನ್ಯೂಸ್ ಸಂಸ್ಥೆಯು ಮತ್ತಷ್ಟು ವಿಶ್ವಾಸಾರ್ಹತೆ ಹಾಗೂ ಜನಬೆಂಬಲವನ್ನು ಗಳಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Advertisement

LEAVE A REPLY

Please enter your comment!
Please enter your name here