ಇಂಡಿಗೋಗೆ ಹೊಸ ಸಿಇಒ: ವಿಲಿಯಂ ವಾಲ್ಷ್ ನೇಮಕ

0
7
Advertisement

ಬ್ರಿಟಿಷ್ ಏರ್ವೇಸ್ ಮಾಜಿ ಮುಖ್ಯಸ್ಥರಿಗೆ ಜವಾಬ್ದಾರಿ; ಆಗಸ್ಟ್ ಬಳಿಕ ಅಧಿಕಾರ ಸ್ವೀಕಾರ ನಿರೀಕ್ಷೆ


ನವದೆಹಲಿ, ಏ.01: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋ ತನ್ನ ನೂತನ ಸಿಇಒ ಆಗಿ ಬ್ರಿಟಿಷ್ ಏರ್ವೇಸ್‌ನ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ಅವರನ್ನು ಮಂಗಳವಾರ ನೇಮಕ ಮಾಡಿದೆ.

ವಿಮಾನಯಾನ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ವಾಲ್ಷ್ ಅವರು ಪ್ರಸ್ತುತ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘ (ಐಎಟಿಎ) ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನೇಮಕಾತಿ ಭಾರತೀಯ ನಿಯಂತ್ರಕ ಸಂಸ್ಥೆಗಳ ಅನುಮೋದನೆಗೆ ಒಳಪಟ್ಟಿದೆ ಎಂದು ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿದೆ.

ಐಎಟಿಎಯಲ್ಲಿ ವಾಲ್ಷ್ ಅವರ ಅಧಿಕಾರಾವಧಿ ಜುಲೈ 31ರಂದು ಮುಗಿಯಲಿದ್ದು, ಆಗಸ್ಟ್ 3ರ ನಂತರ ಅವರು ಇಂಡಿಗೋ ಸಂಸ್ಥೆಗೆ ಸೇರುವ ನಿರೀಕ್ಷೆಯಿದೆ.

ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರ ಹಠಾತ್ ನಿರ್ಗಮನದ ಮೂರು ವಾರಗಳ ಬಳಿಕ ಈ ನೇಮಕಾತಿ ಪ್ರಕಟವಾಗಿದೆ.

ವಿಲಿಯಂ ವಾಲ್ಷ್ ಅವರು 1979ರಲ್ಲಿ ಏರ್ ಲಿಂಗಸ್‌ನಲ್ಲಿ ಪೈಲಟ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಬಳಿಕ ಅದೇ ಸಂಸ್ಥೆಯಲ್ಲಿ ಸಿಇಒ ಆಗಿ ಸೇವೆ ಸಲ್ಲಿಸಿದ ಅವರು, ನಂತರ ಬ್ರಿಟಿಷ್ ಏರ್ವೇಸ್‌ನ ಸಿಇಒ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ವಿಮಾನಯಾನ ಕ್ಷೇತ್ರದಲ್ಲಿ ಅವರ ಅನುಭವವನ್ನು ಗಮನದಲ್ಲಿಟ್ಟುಕೊಂಡು ಇಂಡಿಗೋ ಈ ನೇಮಕಾತಿ ಕೈಗೊಂಡಿದೆ.

Advertisement

LEAVE A REPLY

Please enter your comment!
Please enter your name here