
ದಾವಣಗೆರೆ, ಫೆ.25: ಸ್ಲಂ ಜನರ ಸಂಘಟನೆ–ಕರ್ನಾಟಕ (ರಿ) ವತಿಯಿಂದ ಭೂಮಿ, ವಸತಿ ಹಾಗೂ ಸಂವಿಧಾನಾತ್ಮಕ ಹಕ್ಕುಗಳ ಕುರಿತ ಎರಡು ದಿನಗಳ ರಾಜ್ಯ ಮಟ್ಟದ ಸಮ್ಮೇಳನ ಫೆಬ್ರವರಿ 24 ರಂದು ಆರಂಭವಾಗಿ 25 ರಂದು ಹರಿಹರದಲ್ಲಿ ಪ್ರೊ. ಬಿ.ಕೃಷ್ಣಪ್ಪ ಮೆಮೊರಿಯಲ್ ಹಾಲ್ ನಲ್ಲಿ ಯಶಸ್ವಿಯಾಗಿ ನೆರವೇರಿತು.
ಸಮ್ಮೇಳನದ ಉದ್ಘಾಟನೆಯನ್ನು ಮಾಜಿ ಆಯುಕ್ತರಾದ ರಾಘವೇಂದ್ರ ಟಿ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬೆಂಗಳೂರು, ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ಲಂ ಜನರ ಸಂಘಟಣೆ- ಕರ್ನಾಟಕ ರಾಜ್ಯಾಧ್ಯಕ್ಷರಾದ ಐಸಾಕ್ ಅಮೃತರಾಜ್. ಎಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ. ಎ.ಬಿ. ರಾಮಚಂದ್ರಪ್ಪ, ರಾಜ್ಯ ಸಂಚಾಲಕರು, ಮಾನವ ಬಂಧತ್ವ ವೇದಿಕೆ ಹಾಗೂ ಎಸ್ತರ್ ಮರಿಯಾ ಸೆಲ್ವಮ್, ಸಹ ನಿರ್ದೇಶಕರು ಆಕ್ಸನ್ ಏಡ್ ಅಸೋಸಿಯೇಷನ್, ಭಾಗವಹಿಸಿ ಮಾನವ ಬಂಧುತ್ವ, ಸಾಮಾಜಿಕ ನ್ಯಾಯ ಹಾಗೂ ಸಂಘಟಿತ ಹೋರಾಟಗಳ ಅಗತ್ಯತೆಯ ಕುರಿತು ಮಾತನಾಡಿದರು.

ಮೊದಲ ದಿನ ಭೂಮಿ ಮತ್ತು ವಸತಿ ಹಕ್ಕು ಹಾಗೂ ಮಾನವ ಬಂಧುತ್ವ ಮತ್ತು ಸಾಮಾಜಿಕ ಸಂಬಂಧಗಳು, ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಹಾಗೂ ಅಸಂಘಟಿತ ಕಾರ್ಮಿಕರ ಬದುಕಿನಲ್ಲಿ ಹೊಸ ಕಾರ್ಮಿಕ ಸಂಹಿತೆ ಒಂದು ಓಳನೋಟ ಎಂಬುದರ ಕುರಿತು ವಿಷಯ ಮಂಡನೆ ನಡೆಯಿತು. ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು, ಅನೌಪಚಾರಿಕ ಕಾರ್ಮಿಕರ ಬದುಕಿನಲ್ಲಿ ಹೊಸ ಕಾಯ್ದೆಗಳ ಪರಿಣಾಮಗಳ ಬಗ್ಗೆ ಚರ್ಚೆ ನಡೆಸಿದರು. ಪ್ರಸ್ತುತ ಭೂಮಿ ಮತ್ತು ವಸತಿ ಹಕ್ಕು ಹಾಗೂ ರಾಜಕೀಯ ವಿದ್ಯಮಾನಗಳು ಮತ್ತು ಸಾಮಾಜಿಕ ನ್ಯಾಯದ ಅಗತ್ಯತೆ ಕುರಿತಂತೆ ಸಂಪನ್ಮೂಲ ವ್ಯಕ್ತಿಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ವಿಚಾರ ಮಂಡನೆಯಲ್ಲಿ, ಪಾರ್ವತಿ ಪೂಜಾರ, ಜಿಲ್ಲಾ ಕಾರ್ಯದರ್ಶಿನ ಹಾವೇರಿ, ಶಿವಮ್ಮ ಎಂ., ಜಿಲ್ಲಾ ಪ್ರತಿನಿಧಿ ಚಾಮರಾಜನಗರ, ಎನ್. ವೆಂಕಟೇಶ, ಪ್ರಧಾನ ಕಾರ್ಯದರ್ಶಿ ವಿಜಯನಗರ ಜಿಲ್ಲೆ, ಅಲ್ಲಮಪ್ರಭು ನಿಂಬರ್ಗಾ, ಜಿಲ್ಲಾ ಅಧ್ಯಕ್ಷರು ಕಲಬುರಗಿ, ಮಂಜಣ್ಣ ಕೆಳಗಿನಮನೆ, ಜಿಲ್ಲಾ ಕಾರ್ಯದರ್ಶಿ ಚಿತ್ರದುರ್ಗ, ರಾಜೇಶ್. ಕೆ, ಜಿಲ್ಲಾಧ್ಯಕ್ಷರು ಬೆಂಗಳೂರು ಹಾಗೂ ರಾಘವೇಂದ್ರ ಟಿ., ಮಾನ್ಯ ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು, ಡಾ. ಸಿದ್ಧನ ಗೌಡ ಪಾಟೀಲ, ಪ್ರಗತಿಪರ ಚಿಂತಕರು ಹಾಗೂ ಹೋರಾಟಗಾರರು, ಕ್ಲಿಪ್ಟನ್ ಡಿ.ರೊಜಾರಿಯೊ, ರಾಷ್ಟ್ರೀಯ ಕಾರ್ಯದರ್ಶಿ, ಸಿ.ಪಿ.ಐ. ಎಂ. ಎಲ್ (ಎಲ್), ಕಾಮ್ರೆಡ್ ಮೈತ್ರೇಯಿ ಕೃಷ್ಣನ್, ರಾಜ್ಯ ಕಾರ್ಯದರ್ಶಿಗಳು, ಸಿ.ಪಿ.ಐ. ಎಂ. ಎಲ್ (ಎಲ್) ಕರ್ನಾಟಕ ಉಪಸ್ಥಿತರಿದ್ದರು.
ಎರಡನೇ ದಿನ ‘ಜನರ ಹೋರಾಟದಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ ಒಂದು ಅವಲೋಕನ, ಸ್ಲಂ ಜನರ ಸಂಘಟನೆ ಮುಂದಿನ ಹೆಜ್ಜೆಗಳು, ಎಂಬ ವಿಚಾರದ ಕುರಿತು ಚರ್ಚೆ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಪಾಲ್ಗೊಂಡು ಸಂಘಟನೆಯ ಭವಿಷ್ಯದ ಕಾರ್ಯಯೋಜನೆ ರೂಪಿಸಿದರು. ವಿಚಾರ ಮಂಡನೆಯಲ್ಲಿ ರೇಷ್ಮಾ,ಬೆಂಗಳೂರು, ಸೋನುಬಾಯಿ ಶೃಂಗೇರಿ, ಕಲಬುರ್ಗಿ, ಕರಿಬಸಪ್ಪ, ದಾವಣಗೆರೆ, ಫಕೀರಪ್ಪ ಹುಲಕಲ್, ಯಾದಗಿರಿ, ಎಚ್. ಸೋಮಪ್ಪ, ಬಳ್ಳಾರಿ, ಶ್ವತಾ, ಮಂಗಳಮುಖಿ ಘಟಕ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಪತ್ರಕರ್ತರ ಯುವ ಹೋರಾಟಗಾರ ಅರುಣ್ ಭೂಪಾಲ್ ಮಾತನಾಡಿ, ಹಕ್ಕುಗಳಿಗಾಗಿ ಹೋರಾಟ ಸಂಘಟಿತ ಮತ್ತು ಸಂವಿಧಾನಾತ್ಮಕ ಮಾರ್ಗದಲ್ಲೇ ಸಾಗಬೇಕು ಮಾದ್ಯಮವನ್ನು ಹೋರಾಟಗಾರರು ಸಮರ್ಪಕವಾಗಿ ಬಳಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ತಿಳಿಸಿದರು. ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮತ್ತು ಜಿಲ್ಲಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ರಾಜ್ಯ ಮಟ್ಟದ ಹೋರಾಟಗಳನ್ನು ಬಲಪಡಿಸಲು ಮತ್ತು ಭೂಮಿ–ವಸತಿ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸಲು ನಿರ್ಣಯ ಕೈಗೊಳ್ಳಲಾಗುವುದೆಂದು ಸ್ಲಂಜನರ ಸಂಘಟನೆಯ ರಾಜ್ಯದ್ಯಕ್ಷರಾದ ಐಸಾಕ್ ಅಮೃತ್ ಅವರು ತಿಳಿಸಿದರು. ಕಾರ್ಯಕ್ರಮದ ಎಲ್ಲಾ ವ್ಯವಸ್ಥೆಯನ್ನುಸ್ಲಂ ಜನರ ಸಂಘಟನೆ–ಕರ್ನಾಟಕ (ರಿ) ಹಾಗೂ ಮಾನವ ಬಂಧುತ್ವ ವೇದಿಕೆ ಮತ್ತುಆಕ್ಸನ್‌ಏಡ್ ಕರ್ನಾಟಕ ಪ್ರೊಜೆಕ್ಟ್ ಸಮರ್ಪಕವಾಗಿ ಯಶಸ್ವಿಯಾಗಿ ನಿರ್ವಹಿಸಿತು.





