ಆನ್‌ಲೈನ್ ಗೇಮಿಂಗ್ ಗೆ ಮತ್ತೊಂದು ಬಲಿ; ಧಾರವಾಡದಲ್ಲಿ ಯುವಕ ಆತ್ಮಹತ್ಯೆ!

0
5
Advertisement

ಧಾರವಾಡ, ಫೆ.14: ಗಾಜಿಯಾಬಾದ್‌ನಲ್ಲಿ ಕೊರಿಯನ್ ಗೇಮ್ ವ್ಯಸನಕ್ಕೆ ಬಲಿಯಾಗಿ ಮೂವರು ಸೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಇನ್ನೂ ಜನಮನದಿಂದ ಮಾಸುವ ಮೊದಲೇ, ಕೊರಿಯನ್ ಗೇಮ್ ವ್ಯಸನದಿಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಮತ್ತೊಂದು ದುರ್ಘಟನೆ ಧಾರವಾಡ ನಗರದ ಮಂಗಳಗಟ್ಟಿ ಪ್ಲಾಟ್‌ನಲ್ಲಿ ನಡೆದಿದೆ.

ನೇಣು ಬಿಗಿದುಕೊಂಡು ಜೀವ ತೆರೆದ ಯುವಕನನ್ನು ವಿಕಾಸ್ (20) ಎಂದು ಗುರುತಿಸಲಾಗಿದೆ. ಫೆಬ್ರವರಿ 6ರಂದು ಈ ಘಟನೆ ನಡೆದಿದ್ದು, ನಂತರ ಪೊಲೀಸರು ಯುವಕನ ಮೊಬೈಲ್‌ಫೋನ್‌ನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಮೊಬೈಲ್‌ ಪರಿಶೀಲನೆ ವೇಳೆ ಕೊರಿಯನ್ ಗೇಮ್ಸ್ ಪತ್ತೆಯಾಗಿದ್ದು, ವಿಕಾಸ್ ಗೇಮ್ ವ್ಯಸನಕ್ಕೆ ಒಳಗಾಗಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಪಿಯುಸಿ ಸೈನ್ಸ್ ಪೂರ್ಣಗೊಳಿಸಿದ ಬಳಿಕ ಮನೆಯಲ್ಲೇ ಇದ್ದ ವಿಕಾಸ್, ಕುಟುಂಬದವರಿಗೆ ತಿಳಿಯದಂತೆ ಗೇಮ್ಸ್ ಆಡುತ್ತಿದ್ದನೆಂದು ತಿಳಿದುಬಂದಿದೆ. ಆತ್ಮಹತ್ಯೆಗೆ ಮುನ್ನ “ನನ್ನ ಸಾವಿಗೆ ನಾನೇ ಕಾರಣ” ಎಂದು ಸ್ವಯಂ ಸಂದೇಶ ಬರೆದಿದ್ದಾನೆ ಎನ್ನಲಾಗಿದೆ.

ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇತ್ತೀಚೆಗೆ **Ghaziabad**ನಲ್ಲಿ ಸಂಭವಿಸಿದ್ದ ಘಟನೆಯ ಬಳಿಕ ಕೊರಿಯನ್ ಗೇಮ್ ವ್ಯಸನದ ಅಪಾಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕ ಹೆಚ್ಚಾಗಿದೆ.

Advertisement

LEAVE A REPLY

Please enter your comment!
Please enter your name here