
ಎಐ ಆಧಾರಿತ ಎರಡು ಹೊಸ ಮೊಬೈಲ್ ಆಪ್ ಬಿಡುಗಡೆ; ಓಮಿಲೋಸ್ ಸೆಲ್ಯೂಷನ್ಸ್ ಫಾರ್ ಯು ಆಯೋಜಿಸಿದ್ದ ಕಾರ್ಯಕ್ರಮ
ಬೆಂಗಳೂರು, ಫೆಬ್ರವರಿ 21: ಕೃತಕ ಬುದ್ಧಿ ಮತ್ತೆ (ಎಐ) ನ್ಯಾಯಾಂಗ ಕ್ಷೇತ್ರದಲ್ಲಿ ಅವಳಡಿಸಿಕೊಳ್ಳುವ ಮೂಲಕ ತ್ವರಿತವಾಗಿ ನ್ಯಾಯ ದೊರಕಿಸಿಕೊಡಲು ಶ್ರಮಿಸಿ” ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾ.ಗೋಪಾಲಗೌಡ ಹೇಳಿದರು.
ಓಮಿಲೋಸ್ ಸೆಲ್ಯೂಷನ್ಸ್ ಫಾರ್ ಯು ಎಂಬ ಕಂಪನಿಯು ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ “ವಕೀಲ್ ಡಾಟ್ ಎಐ ಮತ್ತು ಲೀಗಲ್ ಸ್ನಾಪ್ಸ್ ಡಾಟ್ ಇನ್ಫೋ” ಎಂಬ ಎರಡು ಮೊಬೈಲ್ ಆಪ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, “ಎಐ ಕೇವಲ ಒಂದು ಕೃತಕವಾಗಿದೆಯೇ ಹೊರತು ಇದರಲ್ಲಿ ನೈಜ್ಯತೆ ಇಲ್ಲ. ಎಲ್ಲಾ ಕ್ಷೇತ್ರಕ್ಕೂ ಎಐ ಅಳವಡಿಸಿಕೊಳ್ಳಬಹುದು ಎಂಬುದು ಸುಳ್ಳು. ಅವಶ್ಯ ಇದ್ದ ಕಡೆ ಮಾತ್ರ ಅಳವಡಿಸಿಕೊಳ್ಳಬೇಕು. ಇದನ್ನು ಉಪಯೋಗಿಸಿಕೊಂಡು ತ್ವರಿತವಾಗಿ ನ್ಯಾಯ ದೊರಕಿಸಿಕೊಡಿ” ಎಂದು ಸಲಹೆ ನೀಡಿದರು.

“ಕಾನೂನು ಮತ್ತು ನಿಯಮಗಳು ಮಾನವೀಯತೆ ಆಧಾರದ ಮೇಲೆ ನಿಲ್ಲಬೇಕು. ಸಮಾಜದ ವ್ಯವಸ್ಥೆಯ ಬದಲಾವಣೆ ಅವಶ್ಯಕತೆ ಇದೆ. ಸಮಾಜದ ನಗ್ನ ಸತ್ಯಗಳನ್ನು ಅರಿತುಕೊಂಡು, ಮಾನವೀತೆಯನ್ನು ಮೈಗೂಡಿಸಿಕೊಂಡು ಮಾನವರ ಸಂಕಷ್ಟಗಳಿಗೆ ನ್ಯಾಯ ಕಲ್ಪಿಸಿಕೊಟ್ಟಾಗ ಮಾತ್ರ ಜನರಿಗೆ ನ್ಯಾಯಾಂಗದ ಮೇಲೆ ವಿಶ್ವಾಸ ಮೂಡಲಿದೆ” ಎಂದರು.
“ಕೇವಲ ಹಣ ಪಡೆದು ನ್ಯಾಯ ನೀಡುವುದು ಒಂದೇ ಭ್ರಷ್ಟಾಚಾರವಲ್ಲ. ಬದಲಾಗಿ ಶ್ರೀಮಂತ ವರ್ಗದವರಿಗೆ ಒಂದು ನ್ಯಾಯ, ಬಡವರಿಗೆ ಮತ್ತೊಂದು ನ್ಯಾಯ ಕಲ್ಪಿಸುವುದು, ಜಾತಿಯ ಆಧಾರದ ಮೇಲೆ ನ್ಯಾಯ ನೀಡುವುದು ಕೂಡ ಭ್ರಷ್ಟಾಚಾರವಾಗುತ್ತದೆ ಎಂಬುದನ್ನು ಅರಿತುಕೊಳ್ಳಬೇಕು” ಎಂದರು.
ಕುಟುಂಬ ರಾಜಕಾರಣ ಕೇವಲ ರಾಜಕೀಯ ಕ್ಷೇತ್ರದಲ್ಲಿ ಮಾತ್ರವಲ್ಲ, ನ್ಯಾಯಾಂಗಕ್ಕೂ ವಿಸ್ತರಿಸಿರುವುದರಿಂದ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ನ್ಯಾಯ ನಿರೀಕ್ಷೆ ಮಾಡುವುದು ಕಷ್ಟವಾಗಿದೆ. ರಾಜಕೀಯದಲ್ಲಿ ಒಂದು ಕ್ಷೇತ್ರದಲ್ಲಿ ಒಬ್ಬ ನಾಯಕ ಮೃತನಾದರೆ ಅಥವಾ ರಾಜಕೀಯ ನಿವೃತ್ತಿ ಪಡೆದರೆ, ಅದೇ ಕುಟುಂಬದವರನ್ನು ಬೆಳೆಸುವ ಕುಟುಂಬ ರಾಜಕಾರಣವನ್ನು ನಾವೆಲ್ಲರೂ ಕಂಡಿದ್ದೇವೆ. ಇದೇ ವ್ಯವಸ್ಥೆ ನ್ಯಾಯಾಂಗ ಕ್ಷೇತ್ರಕ್ಕೂ ವಿಸ್ತರಿಸಿದೆ. ಜಾತಿ, ಹಣ ಬಲವನ್ನು ಮಾನದಂಡವಾಗಿಟ್ಟುಕೊಂಡು ನ್ಯಾಯಾಂಗ ವ್ಯವಸ್ಥೆಯಲ್ಲಿ ಉನ್ನತ ಸ್ಥಾನಗಳಿಸಲಾಗುತ್ತಿದೆ. ಇದು ನ್ಯಾಯಾಂಗ ವ್ಯವಸ್ಥೆಗೆ ಮಾರಕ” ಎಂದು ಬೇಸರ ವ್ಯಕ್ತಪಡಿಸಿದರು.
“ಕಾನೂನು ಮತ್ತು ನಿಯಮಗಳು ಮಾನವೀಯತೆ ಆಧಾರದ ಮೇಲೆ ನಿಲ್ಲಬೇಕು. ಸಮಾಜದ ವ್ಯವಸ್ಥೆಯ ಬದಲಾವಣೆ ಅವಶ್ಯಕತೆ ಇದೆ. ಸಮಾಜದ ನಗ್ನ ಸತ್ಯಗಳನ್ನು ಅರಿತುಕೊಂಡು, ಮಾನವೀತೆಯನ್ನು ಮೈಗೂಡಿಸಿಕೊಂಡು ಮಾನವರ ಸಂಕಷ್ಟಗಳಿಗೆ ನ್ಯಾಯ ಕಲ್ಪಿಸಿಕೊಟ್ಟಾಗ ಮಾತ್ರ ಜನರಿಗೆ ನ್ಯಾಯಾಂಗದ ಮೇಲೆ ವಿಶ್ವಾಸ ಮೂಡಲಿದೆ” ಎಂದರು.

ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಡಾ. ನಿಶ್ವಲಾನಂದನಾಥ ಸ್ವಾಮೀಜಿ ಮಾತನಾಡಿ, “ನ್ಯಾಯಾಂಗ ವ್ಯವಸ್ಥೆಯಲ್ಲಿ ಅಲ್ಪಮಟ್ಟಿಗೆ ಸಮಸ್ಯೆಗಳಿರುವುದು ಒಪ್ಪಿಕೊಳೋಣ, ಅದರೆ, ಅದನ್ನೇ ದೊಡ್ಡದು ಮಾಡಿ ಜನರಿಗೆ ನ್ಯಾಯಾಂಗದ ಮೇಲಿರುವ ವಿಶ್ವಾಸ ಕಡಿಮೆ ಮಾಡುವುದು ಬೇಡ. ತಂತ್ರಜ್ಞಾನ ಬಂದಿದೆ ಎಂಬ ಕಾರಣಕ್ಕೆ, ನಾವು ಮಾನವೀತೆ ಬಿಟ್ಟು ಕೆಲಸ ಮಾಡುವುದು ಬೇಡ. ಎಐ ಬಳಕೆ ಮಾಡಿಕೊಂಡು ಹೆಚ್ಚಿನ ಸಮಯ ತೆಗೆದುಕೊಳ್ಳದೇ ಕಡಿಮೆ ಅವಧಿಯಲ್ಲಿ ನ್ಯಾಯ ಕಲ್ಪಿಸಿಕೊಡುವಂತಾಗಲಿ” ಎಂದು ಶುಭ ಹಾರೈಸಿದರು.
ವಕೀಲ್ಸ್ ಎಐ ಇದು ಪ್ರತಿ ಹಂತದಲ್ಲಿಯೂ ಕಾನೂನು ವೃತ್ತಿಪರರಿಗೆ ಸಹಾಯ ಮಾಡಲಿದೆ. ಸಂಶೋಧನೆ, ಕರಡು ಪ್ರತಿ ರಚನೆ ಸೇರಿದಂತೆ ಹಲವು ಸೇವೆಗಳನ್ನು ನೀಡಲಿದೆ. ಲೀಗಲ್ ಸ್ನಾಪ್ ಇನ್ಫೋ ಇದು ಕಾನೂನಿನ ಸಾಕ್ಷರತೆ ಮೂಡಿಸಲು ಸಹಕಾರಿಯಾಗಲಿದೆ. ಆ ಮೂಲಕ ಕಾನೂನು ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಟಗೊಳಿಸುವುದು ಇದರ ಉದ್ದೇಶವಾಗಿದೆ.
ಸಂಸದ ಡಾ.ಸಿ.ಎನ್.ಮಂಜುನಾಥ್, “ತಂತ್ರಜ್ಞಾನ ವೇಗಗತಿಯಲ್ಲಿ ಬೆಳವಣಿಗೆ ಸಾಧಿಸಿದಂತೆ ನಾವು ಅವನ್ನು ನಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇಂತಹ ವೇಳೆಯಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿರುವ ಎಐ ಅನ್ನು ವಕೀಲ ವೃತ್ತಿಯಲ್ಲೂ ಅಳವಡಿಸಿಕೊಳ್ಳುತ್ತಿರುವುದು ಪ್ರಶಂಸನೀಯವಾಗಿದೆ. ನಾವು ಸಬಲರಾಗಬೇಕಿದೆ. ತಂತ್ರಜ್ಞಾನ ಬಳಕೆಯಿಂದ ಹೆಚ್ಚಿನ ಪಾರದರ್ಶಕತೆ ಕಾಯ್ದುಕೊಳ್ಳಲುವುದಕ್ಕೆ ಸಹಕಾರಿಯಾಗಲಿದೆ.” ಎಂದರು.
ಈ ಕಾರ್ಯಕ್ರಮದಲ್ಲಿ ಓಮಿಲೋಸ್ ಸೆಲ್ಯೂಷನ್ಸ್ ಪ್ರೈ.ಲಿ. ಸಂಸ್ಥಾಪಕರಾದ ಸುರೇಶ್ ಜಯರಾಮ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
“ಇಂದಿನ ಕಾಲಕ್ಕೆ ಇದು ನಿಜಕ್ಕೂ ಬೇಕಿತ್ತು. ಹೀಗಾಗಿ ನಾನು ಈ ಮೊಬೈಲ್ ಆಪ್ ಬಳಕೆ ಮಾಡುತ್ತೇನೆ. ತಂತ್ರಜ್ಞಾನ ಎಲ್ಲ ಕ್ಷೇತ್ರವನ್ನು ಆವರಿಸುತ್ತಿರುವಾಗ ನಾವು ಸಹ ಅದರ ಜತೆಗೆ ಹೆಜ್ಜೆ ಹಾಕಬೇಕಿದೆ. ಭವಿಷ್ಯದಲ್ಲಿ ತಂತ್ರಜ್ಞಾನ ಬಳಕೆ ಮಾಡದೇ ಹೋಗುವ ವಕೀಲರಿಗೆ ಭವಿಷ್ಯ ಇರುವುದಿಲ್ಲ”
- ಬಿಜ್ಜವರ ಎಚ್.ಲೋಕೇಶ್, ಸಂಸ್ಥಾಪಕ ಅಧ್ಯಕ್ಷರು, ವಂದೇ ಭಾರತಂ ಫೌಂಡೇಷನ್

ನಾವು ಮಿಲಿಯನ್ ಪುಟಗಳೊಂದಿಗೆ ಕೆಲಸ ಮಾಡುತ್ತೇವೆ. ಇಂತಹ ವೇಳೆಯಲ್ಲಿ ಸಂಪೂರ್ಣ ದತ್ತಾಂಶವನ್ನು ಪರಿಶೀಲಿಸಿ, ಅವಶ್ಯವಾದ ಕೆಲವು ಪಾಯಿಂಟ್‌ಗಳನ್ನು ನೀಡಲು ಇಂದು ಎಐ ಅವಶ್ಯಕವಾಗಿದೆ.
- ವಿವೇಕ್ ಸುಬ್ಬಾರೆಡ್ಡಿ, ಅಧ್ಯಕ್ಷರು, ಬೆಂಗಳೂರು ವಕೀಲರ ಸಂಘ

ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಹೊಸ ತಂತ್ರಜ್ಞಾನಗಳು ನಮ್ಮ ಕಾರ್ಯ ಒತ್ತಡವನ್ನು ಕಡಿಮೆ ಮಾಡಿ, ತಪ್ಪುಗಳು ಆಗದಂತೆ ಒಳ್ಳೆಯ ಜನರ ಪರ ತೀರ್ಪು ನೀಡಲು ಸಹಕಾರಿಯಾಗಲಿ.
- ಡಿ.ಎಂ.ಹೆಗ್ಡೆ, ವಕೀಲರು, ಸಂಪಾದಕರು, ವಕೀಲರ ವಾಣಿ.





