
ಬಳ್ಳಾರಿಯ ನೇಕಾರ ಸಮುದಾಯದ ಮಾರ್ಕೆಂಡೇಶ್ವರ ದೇವಸ್ಥಾನದಲ್ಲಿ ಫೆಬ್ರುವರಿ 3 ಮತ್ತು 4 ನೇ ದಿನಾಂಕದಂದು ಶ್ರೀ ಭಾವನಋಷಿ ಭದ್ರಾವತಿದೇವಿಯವ ಕಲ್ಯಾಣೋತ್ಸವ ಅದ್ದೂರಿಯಾಗಿ ನಡೆಸಲಾಯಿತು.
ಈ ಕಾರ್ಯಕ್ರಮಕ್ಕೆ ಬಳ್ಳಾರಿಯ ಹಾಗೂ ಸುತ್ತ ಮುತ್ತಲಿನ ನೇಕಾರ ಪದ್ಮಶಾಲಿ ಸಮುದಾಯದ ಅನೇಕ ನೇಕಾರರ ಆಗಮಿಸಿ ಮಾರ್ಕಂಡೇಶ್ವರ ಸ್ವಾಮಿಯ ದರ್ಶನವನ್ನು ಮತ್ತು ಆಶೀರ್ವಾದವನ್ನು ಪಡೆದರು.
ಈ ಸಂಧರ್ಭದಲ್ಲಿ ಎಸ್‌ಎಸ್ ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಪಡೆದ ನೇಕಾರ ಪದ್ಮಾಶಾಲಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ನೇಕಾರರ ಪ್ರಮುಖರು ಹಾಗೂ ಮಾಜಿ ಸಂಸದರಾದ ಕೆ ಸಿ ಕೊಂಡಯ್ಯನವರು ಹಾಗೂ ಅಖಿಲ ಭಾರತ ಪದ್ಮಶಾಲಿ ಸಂಘದ ಉಪಾಧ್ಯಕ್ಷರಾದ ಶೀಲಾ ಚಿನ್ನ ಬ್ರಹ್ಮಯ್ಯ ಹಾಗೂ ಅಖಿಲ ಭಾರತ ಉಪಾಧ್ಯಕ್ಷರಾದ ಶ್ರೀರಾಮ ಸತ್ಯ ನಾರಾಯಣ, ಅಖಿಲ ಭಾರತ ಪದ್ಮಶಾಲಿ ಉಪಾಧ್ಯಕ್ಷರಾದ ಕೊಂಗತಿ ಕಾಳಪ್ಪ ಹಾಗೂ ಕರ್ನಾಟಕ ಪದ್ಮಶಾಲಿ ಸಂಘದ ರಾಜ್ಯಾಧ್ಯಕ್ಷರಾದ ಜಗದೀಶ್, ಉತ್ತರ ಕರ್ನಾಟಕ ಪದ್ಮಶಾಲಿ ಸಂಘದ ಅಧ್ಯಕ್ಷರಾದ ಸಾಕ ವೆಂಕಟೇಶ್ ಹಾಗೂ ಧರ್ಮಕರ್ತರಾದ ತಿರುವೀದುಲ ವೆಂಕಟೇಶ್, ಗಡ್ಡಂ ಶ್ರೀನಿವಾಸ್, ಜಗನ್ನಾಥಪ್ಪ, ಬಳ್ಳಾರಿ ಪದ್ಮಶಾಲಿ ಸಂಘದ ಜಿಲ್ಲಾಧ್ಯಕ್ಷರಾದ ಅವ್ವಾರು ಮಂಜುನಾಥ್, ಉಪಾಧ್ಯಕ್ಷ ರಾದ ಕೊಡಿ ರಾಜು, ನೇಕಾರ ಸಮುದಾಯದ ಮುಖಂಡರು ಶ್ರೀರಾಮ ರಾಜು, ಮುಹಿಳಾ ಮುಖಂಡರಾದ ಮಂಜುಳಾ, ಉದ್ಯಮಿಗಳಾದ ಎಸ್ಪಿ ವೆಂಕಟೇಶ್, ಪೆನಗೊಂಡಲು ಮಂಜುನಾಥ, ದೇವರೆಡ್ಡಿ ಚಿದಾನಂದಪ್ಪ, ಶ್ರೀರಾಮ ಸತ್ಯನಾರಾಯಣ, ಕೊಡಿಗಂಟಿ ಗೋಪಾಲ್, ಪೇರ್ಮಿ ಶ್ರೀನಿವಾಸ, ಶ್ರೀರಾಮ ಉದಯಕುಮಾರ, ಜಾನ ಮುಕುಂದ, ಹಾಗೂ ಬಳ್ಳಾರಿಯ ಇತರ ಸದಸ್ಯರು ನೇಕಾರ ಬಂಧುಗಳು ಉಪಸ್ಥಿತರಿದ್ದರು.