ಬಾದಾಮಿ | ಅಕ್ರಮವಾಗಿ ಸಂಗ್ರಹಿಸಿದ್ದ ಸಿಲಿಂಡರ್ ಸ್ಫೋಟ ಅಂಗಡಿ ಬೆಂಕಿಗೆ ಆಹುತಿಯಾಯಿತು

0
10
Illegally-stored-cylinders-explode-shop-catches-fire-Badami

ಬಾದಾಮಿಯ ಶಿವಾಜಿ ಸರ್ಕಲ್ ಬಳಿ ಅಕ್ರಮವಾಗಿ ಸಂಗ್ರಹಿಸಿದ್ದ ವಾಣಿಜ್ಯ ಸಿಲಿಂಡರ್‌ಗಳು ಸ್ಫೋಟಗೊಂಡ ಘಟನೆ ನಡೆದಿದೆ.

ದಾದಾಫಿರ್ ಜಮಾದಾರ್ ಅವರ ಅಂಗಡಿಯಲ್ಲಿ ಇಟ್ಟಿದ್ದ 5 ಕೆಜಿ ಸಿಲಿಂಡರ್ ಸ್ಫೋಟದಿಂದ ಅಂಗಡಿ ಮಾಲೀಕ ಸಾಯಿಲ್ ಜಮಾದಾರ್, ದಾದಾಪಿರ್ ಜಮಾದಾರ್ ಹಾಗೂ ಬಾದಾಮಿಯ ಮೂವರು ಹೋಮ್‌ಗಾರ್ಡ್‌ಗಳು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಬಾದಾಮಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.
ದಾದಾಫಿರ್ ಅಂಗಡಿ ಹೊತ್ತಿ ಉರಿದಿದ್ದು, ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಓದಿ: “ಮೌನ ಮುರಿದ ಬಾನು ಮುಷ್ತಾಕ್: ‘ನಾನು ಈ ಹಬ್ಬವನ್ನೂ ಗೌರವಿಸುತ್ತೇನೆ’”

ಪಟ್ಟಣದಲ್ಲಿ ರಸಮಂಜರಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮಕ್ಕೆ ಬಂದೋಬಸ್ತ್ ಮಾಡಲು ಹೋಮ್ ಗಾರ್ಡ್‌ಗಳು ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದ್ದರಿಂದ ಸ್ಥಳಕ್ಕೆ ಬಂದಿದಾರೆ. ದಾಪಿರ್ ಜೊತೆ ಬಂದು ಅಂಗಡಿ ಬಾಗಿಲು ತೆಗೆದಾಗ ಬೆಂಕಿ ಹೊರ ಚಿಮ್ಮಿದರಿಂದ ಹೋಮ್ ಗಾರ್ಡ್‌ಗಳು ಗಾಯಗೊಂಡಿದ್ದಾರೆ.

Advertisement

LEAVE A REPLY

Please enter your comment!
Please enter your name here