ಬಿಪಿ ನ್ಯೂಸ್: ಮೊಳಕಾಲ್ಮೂರು: 17/05/2024 ಶನಿವಾರದಂದು ನಾಗಸಮುದ್ರ ಗ್ರಾಮದಲ್ಲಿ ಅತ್ಯಂತ ಯಶಸ್ವಿಯಾಗಿ ಮುಗಿದ ಬೇಸಿಗೆ ಶಿಬಿರ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ ಪಿ ಎಸ್ ಡ್ಯಾನ್ಸ್ ಅಕಾಡೆಮಿ ಮೊಳಕಾಲ್ಮೂರಿನ ನೃತ್ಯ ನಿರ್ದೇಶಕರಾದ ಚಂದು ಯಾದವ್ ಸಾರಥ್ಯದಲ್ಲಿ ನಾಗಸಮುದ್ರ ಗ್ರಾಮದಲ್ಲಿ 35 ದಿನಗಳ ಕಾಲ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿವಿಧ ರೀತಿಯ ನೃತ್ಯ ತರಬೇತಿ ನೀಡಲಾಯಿತು ಹಾಗೆ ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳಿಗೆ ಸಂಗೀತಭ್ಯಾಸವನ್ನು ಗಾಯಕರಾದ ಜ್ಞಾನೇಶ್ ಹೆಚ್ ನಿರ್ವಹಿಸಿದರು. ಈ ಶಿಬಿರದಲ್ಲಿ ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಡಿ ಜಿ ತಿರುಮಲ ಯು ರಾಜಾಪುರ ಅವರು ಚಿತ್ರಕಲೆ ಹಾಗೂ ಕ್ರಾಫ್ಟ್ ಕಲೆಗಳನ್ನು ಮಕ್ಕಳಿಗೆ ಹೇಳಿಕೊಟ್ಟರು . ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಅಭಿನಂದನಾ ಪತ್ರಗಳನ್ನು ನೀಡಲಾಯಿತು..ಈ ಶಿಬಿರವು ನಾಗಸಮುದ್ರ ದಲ್ಲಿನ ಮಕ್ಕಳ ಪ್ರತಿಭೆಯನ್ನು ಹೊರ ತರುವಲ್ಲಿ ಯಶಸ್ವಿಯಾಯಿತು ಎಂದು ಶಿಬಿರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಯ ಪೋಷಕರು ಶಿಬಿರದ ಸಮಾರೋಪ ಸಮಾರಂಭದಲ್ಲಿ ತಿಳಿಸಿದರು.
ಹಾಗೆ ಇಂಥ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಅಡಗಿರುವ ಹಲವು ಪ್ರತಿಭೆಯನ್ನ ಹೊರ ತರುವಲ್ಲಿ ಯಶಸ್ವಿಯಾಗಿವೆ, ಮುಂದಿನ ದಿನಗಳಲ್ಲಿ ಬೇಸಿಗೆ ಶಿಬಿರವನ್ನು ಪ್ರತಿ ವರ್ಷ ನಡೆಸಿಕೊಂಡು ಬೇಕೆಂದು ಗ್ರಾಮಸ್ಥರು ಕೇಳಿಕೊಂಡರು ಇದೆ ಸಂದರ್ಭದಲ್ಲಿ ಬೇಸಿಗೆ ಶಿಬಿರಕ್ಕೆ ಯಶಸ್ಸಿಗೆ ಕಾರಣರಾದ ನಾಗಸಮುದ್ರ ಗ್ರಾಮದ ಎಲ್ಲ ಪೋಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ .ಸಹಕರಿಸಿದ ಅನಿಲ್.ಮಂಜು.ಸಂಜಯ್ ಯೋಗಿ ಎಲ್ಲರಿಗೂ ಧನ್ಯವಾದಗಳು ನೃತ್ಯ ನಿರ್ದೇಶಕರಾದ ಚಂದು ಯಾದವ್ ಅವರು ತಿಳಿಸಿದರು.