ಸನ್ನತಿ ಪಂಚಶೀಲ ಪಾದಯಾತ್ರೆ ಯಶಸ್ವಿಗೊಳಿಸೋಣ: ದಲಿತ ಸಂಘರ್ಷ ಸಮಿತಿ (ಪ್ರೊ ಕೃಷ್ಣಪ್ಪ)ತಾಲೂಕು ಸಂಚಾಲಕ ದುರುಗಪ್ಪ

0
14

Bp News Karnataka, ಸಿರುಗುಪ್ಪ, Dec.02.2024:

     ತಾಲೂಕಿನ ಸರ್ಕಾರಿ ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ, ಸನ್ನಿತಿ ಪಂಚಶೀಲ ಪಾದಯಾತ್ರೆ ಪೂರ್ವಭಾವಿ ಸಭೆಯನ್ನು ಕರೆದಿದ್ದು, ದಿನಾಂಕ 4.12.2024ರಂದು ಸಿರುಗುಪ್ಪ ನಗರಕ್ಕೆ ಆಗಮಿಸಲಿದ್ದು ಇದರ ಕಾರ್ಯಕ್ರಮದ ಅಂಗವಾಗಿ ಸಭೆ ಕರೆಯಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಪ್ರೊ ಕೃಷ್ಣಪ್ಪನ)ತಾಲೂಕು ಸಂಚಾರಕರಾದ ಎಚ್. ದುರುಗಪ್ಪ ಅವರು ಮಾತನಾಡಿ ಕಂದಾಚಾರ ಕಾರ್ಗತ್ತಿನಿಂದ ಸತ್ಯದ ಕಡೆ ನಮ್ಮೆಲ್ಲರನ್ನು ಮೌಡ್ಯದಿಂದ ಹೊರಬರಲು ನಮ್ಮೆಲ್ಲರ ಒಳಿತಿಗಾಗಿ ಸಮಿತಿ ಪಂಚಶೀಲ ಪಾದಯಾತ್ರೆ ಡಿಸೆಂಬರ್ 4 ರಂದು ಆಗಮಿಸುತ್ತಾರೆ ಈ ಒಂದು ಕಾರ್ಯಕ್ರಮದ ಪ್ರಯುಕ್ತ ಎಲ್ಲಾ ಸಂಘಟನೆಯ ಪದಾಧಿಕಾರಿಗಳು ಸಾರ್ವಜನಿಕರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ತಿಳಿಸಿದರು.
ಈ ಸಂದರ್ಭದಲ್ಲಿ ಬಿ ಆರ್ ಅಂಬೇಡ್ಕರ್ ಅಧ್ಯಕ್ಷರು ಕೊಡ್ಲೆ ಮಲ್ಲಿಕಾರ್ಜುನ, ರಾಮಪ್ಪ ಚಲವಾದಿ ಮಹಾಸಭಾಧ್ಯಕ್ಷ ರಾಮಣ್ಣ ಕೊಡ್ಲಿ ಧರ್ಮರಾಜ್ ಲಕ್ಷ್ಮಣ್ ಭಂಡಾರಿ ಚಿದಾನಂದಪ್ಪ ನಂದೀಶ ಹಳೆಕೋಟೆ ಮತ್ತು ಕಾರ್ಯಕರ್ತರು ಇದ್ದರು.