ಭಾರತದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನವೆಂಬರ್ 26 ಬಹಳ ಮಹತ್ವದ ದಿನವಾಗಿದೆ. ಡಾ. ಕೊಡ್ಲೆ ಮಲ್ಲಿಕಾರ್ಜುನ್

0
9

Bp News Karnataka, ಸಿರುಗುಪ್ಪ, Nov.26.2024:

   ಜಗತ್ತಿನ ಅತಿ ದೊಡ್ಡ ಲಿಖಿತ ಸಂವಿಧಾನ ಭಾರತೀಯ ಸಂವಿಧಾನ ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನಾಚರಣೆ ಆಚರಿಸಲಾಗುತ್ತದೆ. ದೇಶದ ಎಲ್ಲಾ ಕಚೇರಿಗಳಲ್ಲಿ ಶಾಲೆ ಕಾಲೇಜುಗಳಲ್ಲಿ ಮತ್ತು ಕೆಲವು ಸಾರ್ವಜನಿಕ ಸ್ಥಳಗಳಲ್ಲಿ ಸಂವಿಧಾನ ದಿನಾಚರಣೆ ಮತ್ತು ಜನರಿಗೆ ಸಂವಿಧಾನದ ಅರಿವು ಮೂಡುತ್ತದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕರು ಡಾ. ಕೊಡ್ಲೆ ಮಲ್ಲಿಕಾರ್ಜುನ ತಿಳಿಸಿದರು.

  ತಾಲೂಕು ಆಡಳಿತ ಕಚೇರಿ ವತಿಯಿಂದ ಸಂವಿಧಾನ ಪ್ರಸ್ತಾವನೆಯನ್ನು ಓದೋಣ, ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯೋಣ ಸಂವಿಧಾನದ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಮಾತನಾಡಿದ ಅವರು ಭಾರತೀಯ ಪ್ರಜೆಗಳಾದ ನಮ್ಮೆಲ್ಲರಿಗೂ ಸಮಾನ ಅವಕಾಶ ಸ್ವತಂತ್ರ ಭಾವೈಕ್ಯತೆ ಸಹೋದರತೆ ನೆಲೆಯಿಂದ ಭಾರತ ಸಂವಿಧಾನವು ರಚನೆಯಾಗಿದೆ ಸಂವಿಧಾನವು ನಾವು ಉಳಿಸೋಣ ಬೆಳೆಸೋಣ ಎಂದು ತಿಳಿಸಿದರು.
             ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸತೀಶ ತಾಲೂಕಿನ ತಹಸಿಲ್ದಾರ್ ವಿಶ್ವನಾಥ್, ತಾಲೂಕು ಪಂಚಾಯಿತಿ ಇ ಓ ಪವನ್ ಕುಮಾರ್, ವೈದ್ಯಾಧಿಕಾರಿಯಾದ ಈರಣ್ಣ, ಉನ್ಯಾಸಕರದ ಪಂಪಾಪತಿ, ರಾಮಣ್ಣ, ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಇದ್ದರು.