ನ್ಯಾಷನಲ್ ಹೆಲ್ತ್ ಮಿಷನ್ ಕೇಂದ್ರ ತಂಡದ ಸದಸ್ಯರು ಭೇಟಿ

0
45

Bp News Karnataka, ಸಿರುಗುಪ್ಪ, Nov.25.2024:

    ತಾಲೂಕಿನ ಕುರುವಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಭಾರತ ಸರ್ಕಾರದ 16ನೇ ಸಾಮಾನ್ಯ ವಿಮರ್ಶ ಕಾರ್ಯಗಾರ ನ್ಯಾಷನಲ್ ಹೆಲ್ತ್ ಮಿಷನ್ ವತಿಯಿಂದ ಕೇಂದ್ರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

               ಕರ್ನಾಟಕ ರಾಜ್ಯದ ಬಳ್ಳಾರಿ ಮತ್ತು ದಕ್ಷಿಣ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಮಾತ್ರ ಆಯ್ದುಕೊಂಡು ಅದರಲ್ಲಿ ತಾಲೂಕು ಕುರುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದೆಹಲಿಯ ತಂಡದ ಸದಸ್ಯರಾದ ಡಾ. ರೀಟಾ, ಮತ್ತು ದೆಹಲಿಯಿಂದ ಸುನಿಧಿ ಸೇತು ಅವರ ನೇತೃತ್ವದಲ್ಲಿ ಭೇಟಿ ನೀಡಿದರು. ಆಸ್ಪತ್ರೆಯ ಹೊರರೋಗಿಯ ವಿಭಾಗ ಮತ್ತು ಒಳರೋಗಿಗಳ ವಿಭಾಗ ಚಿಕಿತ್ಸೆ, ಮತ್ತು ಆಸ್ಪತ್ರೆಯ ಪ್ರತಿಯೊಂದು ವಿಭಾಗಗಳನ್ನು ಪರಿಶೀಲನೆ ಮಾಡಿ ಜನರಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗುವ ವಿವರ ಔಷಧಿ, ದಾಸ್ತಾನು ಲಭ್ಯತೆ, ರೋಗಿಗಳಿಗೆ ಆಸ್ಪತ್ರೆಯ ಔಷಧಿಗಳನ್ನು ನೀಡುವುದು ಹೆರಿಗೆ ಕೋಣೆಯ ಗುಣಮಟ್ಟದ, ಪ್ರಯೋಗಾಲಯ ಗುಣಮಟ್ಟ ಮತ್ತು ಕೇಂದ್ರದ ವೈದ್ಯರ ತಂಡ ಸದಸ್ಯರು ಗ್ರಾಮದ ಸಮುದಾಯ ಜನರ ಜೊತೆಗೆ ಮನೆ ಮನೆಗೆ ಭೇಟಿ ನೀಡಿ ಜನರಿಗೆ ಆರೋಗ್ಯ ಸೌಲಭ್ಯ ಉತ್ತಮ ಗುಣಮಟ್ಟದ ಚಿಕಿತ್ಸೆ ಸಿಗುತ್ತದೆ ಎಲ್ಲವೋ ವಿವರ ಪಡೆದು, ವೈದ್ಯಧಿಕಾರಿ ಡಾ ವಿದ್ಯಾ ಶ್ರೀ ಅವರು ಜನರಿಗೆ ಉತ್ತಮ ಚಿಕಿತ್ಸೆ ನೀಡುತ್ತಿರುವುದು ಕೇಂದ್ರ ತಂಡದ ಸದಸ್ಯರು ಶ್ಲಾಘನೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಡಿಎಚ್ಒ ಡಾ ವೀರೇಂದ್ರ ಕುಮಾರ್, ವೈದ್ಯಧಿಕಾರಿಗಳಾದ ಡಾ ಮರಿಯಂ ,ಡಾ ಪೂರ್ಣಿಮಾ ಕಟ್ಟಿಮನಿ, ಆಸ್ಪತ್ರೆಯ ಸಿಬ್ಬಂದಿಗಳು, ಮತ್ತು ಆಶಾ ಕಾರ್ಯಕರ್ತರು ಇದ್ದರು.