ಕಲೆ ಮತ್ತು ಕಲಾವಿದರನ್ನು ಗೌರವಿಸಿ ನಾಟಕಗಳಉತ್ತಮ ಮೌಲ್ಯ ಉಳಿಸಿ.ಎಂ ಎಸ್.ಸಿದ್ದಪ್ಪ

0
11

Bp News Karnataka, ಸಿರುಗುಪ್ಪ, Nov.21.2024:

ಕಲೆ ಮತ್ತು ಕಲಾವಿದರಿಗೆ ಗೌರವಿಸಿ ಅವರನ್ನು ಪ್ರೋತ್ಸಾಹಿಸುವ ಮೂಲಕ ನಮ್ಮ ಸಂಸ್ಕೃತಿ ಬೆಳೆಸಬೇಕು ಕಲೆಗೆ ಯಾವುದೇ ಜಾತಿ ಧರ್ಮ ಹಂಗಿಲ್ಲ. ಉತ್ತಮ ಕಲಾವಿದರನ್ನು ಸಮಾಜ ಚೌಕಟ್ಟ ಮೀರಿ ಬೆಳೆಸಬೇಕೆಂದು ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷ ಎಂ ಎಸ್ ಸಿದ್ದಪ್ಪ ಹೇಳಿದರು.

ಸಿರುಗುಪ್ಪ ತಾಲೂಕಿನ ಹಾಗಲೂರು ಗ್ರಾಮದಲ್ಲಿ ಗೌರಿ ಹಬ್ಬದ ಅಂಗವಾಗಿ ಏರ್ಪಡಿಸಿದ ‘ಶಶಿರೇಖಾ ಭರಣಿ ಅರ್ಥಾತ್ ಘಟೋತ ಗಜಾ ಮಾಯಾಜಾಲ’ ಎಂಬ ಪೌರಾಣಿಕ ಬಯಲು ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಾರಾವಾಹಿ ನಡುವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕಗಳು ಇಂದಿಗೂ ಜನಾಕರ್ಷಣೆ ಉಳಿಸಿಕೊಂಡಿವೆ.ಕಲಾ ಪ್ರದರ್ಶನಕ್ಕೆ ಸರ್ಕಾರವು ಹೆಚ್ಚು ಪ್ರೋತ್ಸಾಹ ಧನ ನೀಡಬೇಕು. ಕಲಾವಿದರ ಮಾಸಾಸನವನ್ನು ಹೆಚ್ಚಿಸಬೇಕು ಎಂದು ಅವರು ಒತ್ತಾಯಿಸಿರಲ್ಲದೆ, ಹಿಂದಿನ ಕಾಲದಲ್ಲಿ ಪ್ರತಿ ಗ್ರಾಮಗಳಲ್ಲಿ ಜಾತ್ರೆ ಉತ್ಸವ ಸೇರಿದಂತೆ ವರ್ಷಕ್ಕೆ ಕನಿಷ್ಠ ಎರಡು ಮೂರು ಬಾರಿ ಜಾನಪದ ಕಲೆಗಳ ಪ ಪ್ರದರ್ಶನ ನಡೆಯುತ್ತಿದ್ದವು ಗ್ರಾಮೀಣ ಭಾಗದ ಕಲಾವಿದರಿಗೆ ಪ್ರೋತ್ಸಾಹವು ದೊರೆಯುತಿತ್ತು ಇತ್ತೀಚಿಗೆ ಸಿನಿಮಾ ಮತ್ತು ಟಿವಿಗಳ ಹಾವಳಿಯಿಂದ ಜೀವಂತ ಕಲೆಯಾದ ನಾಟಕ ಮತ್ತು ಬಯಲಾಟ ಮರೆಯಾಗುತ್ತಿವೆ. ನಮ್ಮ ಜೀವನ ಶೈಲಿ,ಪರಂಪರೆಯನ್ನು ಬಿಂಬಿಸುವ ಇಂತಹ ಕಲೆಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸುವ ಕೆಲಸವಾಗಬೇಕು ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಹೆಚ್ಚು ಹೊಸಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ರೆಡ್ಡಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬೆಳ್ಳುಳ್ಳಿ ಶೇಖಣ್ಣ, ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಶ್ರೀಶೈಲಪ್ಪ, ದರಪ್ಪ ನಾಯಕ ಕುಮಾರಪ್ಪ, ಗೋವಿಂದಪ್ಪ, ಮಲ್ಲಯ್ಯ ,ಮಹೇಶ್ ಗೌಡ, ಊರಿನ ಹಿರಿಯರು ಯುವಕರು ಪಂಚಾಯತಿ ಸದಸ್ಯರು ಮತ್ತು ನೂರಾರು ಸಂಖ್ಯೆಯ ಕಲಾಭಿಮಾನಿಗಳು ಉಪಸ್ಥಿತರಿದ್ದರು.