ಕೊಪ್ಪಳ ಜಿಲ್ಲಾಡಳಿತ ಮುಂಭಾಗ ನವೆಂಬರ್ 22ರಂದು ವಕ್ಫ್ ವಿರುದ್ಧ ಧರಣಿ ಸತ್ಯಾಗ್ರಹ:

0
21

Bp News Karnataka, ಕೊಪ್ಪಳ, Nov.20.2024:

 ಇಂದು ಕೊಪ್ಪಳ ನಗರದ ಬಿಜೆಪಿ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡಿದ ಭಾರತೀಯ ಜನತಾ ಪಾರ್ಟಿ, ಕೊಪ್ಪಳ ಜಿಲ್ಲಾ ಅಧ್ಯಕ್ಷರು ಶ್ರೀ ನವೀನ್ ಈ. ಗುಳಗಣ್ಣನವರ ಅವರು ಮಾತನಾಡ ರೈತರ, ಮಠ ಹಾಗೂ ಮಂದಿರಗಳ ಆಸ್ತಿಗಳನ್ನು ವಕ್ಫ್ ಎಂದು ಅಕ್ರಮವಾಗಿ ಮಾಡಿದ್ದರ ವಿರುದ್ಧ
‘ನಮ್ಮ ಭೂಮಿ ನಮ್ಮ ಹಕ್ಕು’ ಎಂದು ಇದೇ ನವೆಂಬರ್ ದಿನಾಂಕ 22ರ ಶುಕ್ರವಾರದಂದು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯ ವರಗೆ ಕೊಪ್ಪಳ ಜಿಲ್ಲಾ ಆಡಳಿತ ಕಛೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಕೂರುವ ಮೂಲಕ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.