ಕಂಪ್ಲಿಯ ಎಮ್ಮಿಗನೂರಿನಲ್ಲಿ GV ಫೌಂಡೇಷನ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದು ದಿನದ ಉಚಿತ ಕಾರ್ಯಾಗಾರ

0
68

ಕಂಪ್ಲಿ : ಬಿಪಿ ನ್ಯೂಸ್‌ ಅ.21 :

ಕಂಪ್ಲಿ ತಾಲೂಕಿನ ಎಮ್ಮಿಗನೂರಿನ SWS ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಬಡ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯ ರೂಪಿಸಿಕೊಳ್ಳುವುದಕ್ಕಾಗಿ ಬಳ್ಳಾರಿಯ GV ಫೌಂಡೇಶನ್ ವತಿಯಿಂದ KAS/PDO/FDA/SDA/VAO ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಡಾ. ಗಜೇಂದ್ರ ವರ್ಮ ಅಧ್ಯಕ್ಷತೆಯಲ್ಲಿ ಒಂದು ದಿನದ ಉಚಿತ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಸಮಾಜಮುಖಿಯಾಗಿ ಕೆಲಸ ಮಾಡುತ್ತ ಎಲ್ಲರ ಗಮಸ ಸೆಳೆದ GV ಫೌಂಡೇಷನ್‌ ನ ಸಂಯೋಜಕರು ಡಾ. ಗಜೇಂದ್ರ ವರ್ಮ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕಾದರೆ ಕೀಳಿರಿಮೆ ಬಿಟ್ಟು ಸಕಾರಾತ್ಮಕವಾಗಿ ಆಲೋಚಿಸಿ ಮುನ್ನಡೆಯಿರಿ ಹಾಗೂ ಸದಾವಕಾಶಗಳು ಬರಲಿ ಎಂದು ಕಾಯುತ್ತಾ ಇರಬಾರದು‌. ಅಂತಹ ಅವಕಾಶಗಳನ್ನು ನಾವೇ ಸೃಷ್ಠಿ ಮಾಡಲು ಸಾಧ್ಯವಿದ್ದರೆ ಅದಕ್ಕೆ ಮುಂದಾಗಬೇಕು. ಈ ವಿಷಯದಲ್ಲಿ ಕಾಯುವುದಕ್ಕಿಂತ ನಾವೇ ಸೃಷ್ಠಿ ಮಾಡುವುದು ಉತ್ತಮ ಎಂದು ಹೇಳಿದರು.

   ” ನಮ್ಮ ಗ್ರಾಮೀಣ ಭಾಗದ ಶೋಷಿತ ಮತ್ತು ಬಡ ಕುಟುಂಬ ವಿದ್ಯಾರ್ಥಿಗಳ ಬದುಕನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ಅಗತ್ಯವಾದ ಕಾರ್ಯಾಗಾರ ಇದಾಗಿತ್ತು. ಈ ಸ್ಪರ್ಧಾತ್ಮಕ ಕಾರ್ಯಗಾರದಿಂದ ವಿದ್ಯಾರ್ಥಿಗಳಿಗೆ ಹೊಸ ಚೈತನ್ಯ ಬಂದಂತಾಗಿದೆ.”
– ಪಂಪಾಪತಿ ಎಚ್. ಕಾರ್ಯಕ್ರಮದ ಆಯೋಜಕರು

ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಶಕ್ತಿಗಳಾದ ರವಿ ಆರ್, ಸಹಾಯಕ ಪ್ರಾಧ್ಶಾಪಕರಾದ ವಿರುಪಾಕ್ಷ ಕೆ, ಜೀರ್ ಬಸವರಾಜ ಹಾಗೂ ಶಾಲೆಯ ಎಸ್ಡಿಎಂಸಿ ಅಧ್ಶಕ್ಷರಾದ ಎಚ್.ಎಂ. ಚಂದ್ರಶೇಖರ, ಸದಸ್ಶರಾದ ಪಕ್ಕೀರಪ್ಪ, ರಾಮಪ್ಪ ಟಿ.ಪಿ, ಜಡೆಪ್ಪ, ಗಾದಿಲಿಂಗಪ್ಪ, ಹನುಮಂತ, ತಾಯಪ್ಪ, ಅಂಜಿ, ಸಿ.ಮಲ್ಲಿಕಾರ್ಜುನ, ಮಲ್ಲೇಶ ಮತ್ತು ವಿದ್ಶಾರ್ಥಿಗಳನ್ನು ಒಳಗೊಂಡಂತೆ ಉದ್ಯೋಗಾಕಾಂಕ್ಷಿಗಳು ಸಹ ಪಾಲ್ಗೊಂಡಿದ್ದರು ಎಂದರು.