ಅಹಿಂದ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷರಾಗಿ ದೇವರಾಜ್ ಕೆ ಎಂ ನೇಮಕ

0
134

BP NEWS: ಬಳ್ಳಾರಿ: ಜನವರಿ.26:  ದೇವರಾಜ್ ಕೆ. ಎಂ ಬಸಾಪುರ ಮೆಟ್ರಿಕಿ, ಬಳ್ಳಾರಿ ಇವರನ್ನು ಸಾಮಾಜಿಕ ಜಾಲತಾಣ ಅಹಿಂದ ಬಳ್ಳಾರಿ ಜಿಲ್ಲಾಧ್ಯಕ್ಷರು ಅಹಿಂದ ನಾಯಕರು ಎಂದು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇವರನ್ನು ಜಿಲ್ಲಾ ಪಂಚಾಯತಿ ಸದಸ್ಯರನ್ನಾಗಿ ಹಾಗೂ ರಾಜಕೀಯವಾಗಿ ಬಲಿಷ್ಠರನ್ನಾಗಿ ಮಾಡವುದರಿಂದ ಅಹಿಂದ ಸಂಘಟನೆಯನ್ನು ಮತ್ತು
ಅಹಿಂದ ಸಮಾಜವನ್ನು ಸಾಮಾಜಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ಸದೃಢ ಮತ್ತು ಬಲಿಷ್ಠ ಮಾಡಬಹುದು, ಅಹಿಂದ ಸಂಘಟನೆಯು ಶಿಕ್ಷಣ ಸಂಸ್ಥೆ, ಶಾಲೆಗಳು ಮತ್ತು ಬ್ಯಾಂಕುಗಳು ಸ್ಥಾಪಿಸುವ ಗುರಿಯನ್ನು ಹೊಂದಿದೆ. ದೇವರಾಜ್ ಕೆ ಎಂ ಬಸಾಪೂರ್ ಅವರಿಗೆ ಕರ್ನಾಟಕ ರಾಜ್ಯ ಅಹಿಂದ ಸಮುದಾಯದ ಎಲ್ಲಾ ಬಂಧುಗಳ, ಪರವಾಗಿ ಪ್ರಭುಲಿಂಗ ದೊಡ್ಡಿನಿ
ಅಧ್ಯಕ್ಷರು ಅಹಿಂದ ಕರ್ನಾಟಕ ರಾಜ್ಯ ಸಂಘಟನೆ ಅವರು ಅಭಿನಂದನೆಗಳನ್ನು ಬಿಪಿ ನ್ಯೂಸ್ ಮೂಲಕ ತಿಳಿಸಿದರು.

LEAVE A REPLY

Please enter your comment!
Please enter your name here